Skip to main content

Full text of "Vageeshwari Shastri"

See other formats
೫ 
ಸ್ರ 


— 


pe 


ಧಿ 


4 


ಟಗರು 

ಆ 


ಜನಪ್ರಿಯ ಜಾನಪದ ಪುಸ್ತಕ ಮಾಲೆ - ೪೬ 


ವಾಗೀಶರಿ ಶಾ 


ವ್ಯಕ್ತಿ ಪರಿಚಯ 


ಸಿ 
ಮೆ 


ಪ್ರೊ. ಡಿ. ಲಿಂಗಯ್ಯ 


ಕರ್ನಾಟಕ ಜಾನಪದ ಪರಿಷತ್ತು 
ನಂ.1, ಜಲದರ್ಶಿನಿ ಲೇ ಔಟ್‌, 
ಎಂ. ಎಸ್‌. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, 
ಹೊಸ ಬಿ.ಇ.ಎಲ್‌. ರಸ್ತೆ, ಬೆಂಗಳೂರು - 560 054 


VAGEESHWARI SHASTRI- 

A pen portrait - by Prof. D. Lingaiah. 

Published by : KARNATAKA JANAPADA PARISHATHU, 
No.1, Jaladarshini Layout (Near M.S. Ramaiah Hospital Gate), 
New B.E.L. Road, Bengalooru - 560 054. Ph : 080-23605033. 


Pages : 32 Price : Rs.10 2010. 


ಪ್ರಥಮ ಮುದ್ರಣ ೨೦೧೦ 

ಪ್ರತಿಗಳು ೨೦೦೦ 

ಪುಟಗಳು ೩೨ 

ಬೆಲೆ ರೂ.೧೦ (ಹತ್ತು ರೂಪಾಯಿ) 


ಹಕ್ಕುಗಳು ಲೇಖಕರಿಗೆ ಸೇರಿವೆ 
ಗ್ರಂಥ ಪ್ರಕಟಣಾ ಸಲಹಾ ಸಮಿತಿ 


ನಾಡೋಜ ಡಾ. ಜಿ. ನಾರಾಯಣ 
ಶ್ರೀ ಟಿ. ತಿಮ್ಮೇಗೌಡ ಸದಸ್ಯರು 


i 
Pu 


ಶ್ರೀಮತಿ ಇಂದಿರಾ 'ಬಾಲಕೃಷ್ಣ ಸದಸ್ಯರು 
ಶ್ರೀ ಗೊ.ರು. ಚನ್ನಬಸಪ್ಪ ಸದಸ್ಯರು 
ನಾಡೋಜ ಡಾ. ಸಿದ್ದಲಿಂಗಯ್ಯ ಸದಸ್ಯರು 
ik ಎಂ. ಎ. ಜಯಚಂದ ಸದಸ್ತರು 
ತ ಭ್ರ 
್ರೂ. ಡಿ. ಲಿಂಗಯ್ಯ ಸಂಪಾದಕರು 
ನವ ಡಾ. ಚಳ ಶಿವಶಂಕರ್‌ ಕಾರ್ಯದರ್ಶಿ-ಸಂಚಾಲಕರು 
ಮುದ್ರಕರು ಕೃತಿಕ ಪಿಂಟ್‌-ಆ್ಕಡ್‌ 


ನಂ. 58, 1ನೇ ಕ್ರಾಸ್‌, ಜೆ.ಕೆ. ಪುರಂ 
ವಿನಾಯಕನಗರ, ಆಡುಗೋಡಿ ಪೋಸ್ಟ್‌ 
ಬೆ೦ಗಳೂರು - 560 030 

ಮೊಬೈಲ್‌ — 98441 14958 


ಅಧ್ಯಕ್ಷ ರ ಮಾತು 


ಕರ್ನಾಟಕ ಜಾನಪದ ಪರಿಷತ್ತಿನ ಹಲವು ಯೋಜನೆಗಳಲ್ಲಿ ಜನಪದ 
ಪುಸ್ತಕ ಪ್ರಕಟಣೆ ಒಂದು. ಇದರಲ್ಲಿ ವಿದ್ವತ್‌ ಗ್ರಂಥಗಳ ಪ್ರಕಟಣೆಗಳೇ 
ಹೆಚ್ಚು ಇವುಗಳ ಜೊತೆಗೆ "ಜನಪ್ರಿಯ ಜಾನಪದ ಪುಸ್ತಕ ಮಾಲೆ' ಯನ್ನು 
ಪ್ರಾರಂಭಿಸಿದೆ. ಜಾನಪದವನ್ನು ಜನಸಾಮಾನ್ಯರಿಗೆ ತಲುಪಿಸುವುದು ಇದರ 
ಮುಖ್ಯ ಉದ್ದೇಶ. ಇದರಲ್ಲಿ ಜಾನಪದಕ್ಕೆ ದುಡಿದಿರುವ, ದುಡಿಯುತ್ತಿರುವ 
ಕಲಾವಿದರು, ಕಲೆಗಳು, ಸಂಗ್ರಾಹಕರು, ವಿದ್ವಾಂಸರು, ಸ್ವಾರಸ್ಯಕರವಾದ 
ಉಪಯುಕ್ತವಾದ ಜನಪದ ಗೀತಸಾಹಿತ್ಯದ ಸೋದಾಹರಣ ವ್ಯಾಖ್ಯಾನ - 
ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ, ನಾಡಿನ ಪ್ರಸಿದ್ಧ ಸಾಹಿತಿ 
ಸಂಶೋಧಕರಿಂದ ಕಿರುಗ್ರಂಥಗಳನ್ನು ಬರೆಯಿಸಿ, ಪ್ರಕಟಿಸಿ, ಕೇವಲ ಹತ್ತು 
ರೂಪಾಯಿ ಬೆಲೆಗೆ ಒದಗಿಸಲು ಯೋಜಿಸಿದೆ. ಕಡಿಮೆ ಅವಧಿಯಲ್ಲಿ 
ಓದಿಕೊಳ್ಳಬಹುದಾದ ಈ ಗ್ರಂಥಗಳು ಹಲವು ಮಾಹಿತಿಗಳನ್ನು ಸಂಕ್ಷಿಪ್ತವಾಗಿ 
ತಿಳಿಯಪಡಿಸುತ್ತವೆ. 


ಈ ಜನಪ್ರಿಯ ಪುಸ್ತಕ ಮಾಲೆಗೆ ಪ್ರೊ. ಡಿ. ಲಿಂಗಯ್ಯ ಅವರು 
ವಾಗೀಶ್ಚರಿ ಶಾಸ್ತ್ರಿ ಅವರನ್ನು ಕುರಿತ ಗ್ರಂಥವನ್ನು ಬರೆದುಕೊಟ್ಟಿದ್ದಾರೆ. ಗ್ರಂಥದ 
ಲೇಖಕರಿಗೂ ಗಂಥ ಪ್ರಕಟಣಾ ಸಮಿತಿಯ ಸದಸ್ಯರಿಗೂ ಕೃತಜ್ಞತೆಗಳನ್ನು 
ಅರ್ಪಿಸಿ, ಸಹೃದಯರು ಈ ಪುಸ್ತಕವನ್ನು ಸ್ವಾಗತಿಸಬೇಕೆಂದು ಕೇಳಿಕೊಳ್ಳುತ್ತೇನೆ. 


ಬೆ೦ಗಳೂರು ನಾಡೋಜ ಡಾ. ಜಿ. ನಾರಾಯಣ 
ONESIES ಅಧ್ಯಕ್ಷರು 


ಕರ್ನಾಟಕ ಜಾನಪದ ಪರಿಷತ್ತು 


ವಾಗೀಶರಿ ಶಾಸಿ 
ದ ವೆ 


ಸ್ವಾತಂತ್ರ್ಯ ಪೂರ್ವದ ದಿನಗಳು. ವಿದೇಶಿ ಸಂಸ್ಕೃತಿ ಸ್ವದೇಶಿ 
ಸ೦ಸ್ಕೃತಿಯ ಮೇಲೆ ನಿರ್ಭಯವಾಗಿ ಸವಾರಿಮಾಡುತ್ತಿದ್ದ ಸಮಯ. ಅ 
ಅನಿವಾರ್ಯವೆಂಬ ಭಾವನೆ ಗಟ್ಟಿಯಾಗುತ್ತಿದ್ದ ಪರಿಸ್ಥಿತಿ. ಸ್ವದೇಶಿ ಸನಾತ 
ಸಂಸ್ಕೃತಿ ವ್ಯಕ್ತಿನಿಷ್ಠ ನೆಲೆಯಲ್ಲಿ ಉಸಿರಾಡುತಿದ ಕಾಲ. ಪರಕೀಯ ದಾಸ 
ಆ) £ ೧೧ ಹ. 6. ಶಿ 
ವಿಮೋಚನೆ ಮರುಮರೀಚಿಕೆ ಎಂಬ ಅಸಹಾಯಕತೆ. ಅದು ಅಖಂಡ 
ಭಾರತದ ವಿಷಯ ಸಂದರ್ಭವಾಗಿತ್ತು ಅಂಥ ದುರ್ಬರ ಪ್ರಸಂಗದಲ್ಲೂ 
ಕನ್ನಡ ಮೌಖಿಕ ಪರಂಪರೆ ಜೀವಹಿಡಿದಿತ್ತು ಎಂಬುದು ಎಸ್ಮಯಸಂಗತಿ. 
ಅದಕ್ಕೆ ಸಮಾಜದ ಎಲ್ಲಾ ಜನಾ೦ಗದ ಸ್ವೀಪುರುಷರ ಅವ್ಯಕ್ತ ಸಂಸ್ಕೃತಿ ಪ್ರೀತಿ 
ಣಿ ಮೆ ₹ ಲ 
ಕಾರಣ. 


೫೪ 


ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಒಂದು 
ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬ. ಮುಲಕನಾಡು ಒಳಪಂಗಡದ ಸಂಸಾರ. 
ಎಸ್‌... ವಂಕಟೇಶಯ್ಯ ಮತ್ತು ಅನ್ನಪೂರ್ಣಮ್ಮ ದಂಪತಿಗಳು. ಅವರ 
ಏಳು ಮಕ್ಕಳಲ್ಲಿ ನಾಲ್ಕನೆಯ ಮಗಳು ವಾಗೀಶ್ವರಿ. ಜನನ ೨೬. ೦೭. ೧೯೨೬. 
ನಾಮಕರಣ ಮಾಡಿದ್ದು ಅಜ್ಜ ಕೊಣನೂರು ಸುಬ್ಬಮ್ಮ ಅವರ ಕಣ್ಮರೆಯಾದ 
ಮಗಳ ಹೆಸರನ್ನು ನೆನಪಾಗಿ ಮೊಮ್ಮಗಳಿಗೆ ಇಟ್ಟಿದ್ದು. ನಾಲ್ಕನೇ ಮಗುವೂ 
ಹೆಣ್ಣಾದುದರಿ೦ದ ಹೆತ್ತ ತಾಯಿಗೆ ತುಸು ಬೇಸರ. ಆದರೆ ಅಜ್ಜಿಗೆ ಅಕ್ಕರೆ. 
ಹೆಣ್ಣುಮಗುವಿನ ಆರನೆಯ ವಯಸ್ಸಿಗೇ ತಾಯಿಯ ನಿಧನ (೧೯೩೩). 
ಅಜ್ಜಿಯ ಆಸರೆ, ಪೋಷಣೆ ಗಟ್ಟಿ ತಂದೆ ವೆಂಕಟೇಶಯ್ಯ ಕಾಮಗಾರಿ 
ಇಲಾಖೆಯಲ್ಲಿ ಸಬ್‌ ಓವರ್‌ಸೀಯರ್‌. ಊರಿಂದೂರಿಗೆ ಅಲೆಯುವ 


ವಾಗೀಶರಿ ಶಾಸಿ 5 
ವ ಮೆ 


ತಾಬೇದಾರಿ ಕೆಲಸ. ಮಕ್ಕಳಿಗೂ ತಂದೆಯೊಡನೆ ಅಲೆದಾಡುವ ಪರಿಸ್ಥಿತಿ. 
ವಾಗೀಶ್ವರಿಯ ಒಡಹುಟ್ಟಿದವರು : ಪ್ರಸನ್ನ, ಪಾರ್ವತಿ, ಭಾಗೀರಥಿ, ಶೇಷಮ್ಮ, 
ಸರೋಜ, ಎಶ್ರನಾಥ ಮತ್ತು ಸತ್ಯನಾರಾಯಣ. 


ಗಂಡ ಮಂಜಂಯ್ಯನವರನ್ನು ಕಳೆದುಕೊಂಡ ಸುಬ್ಬಮ್ಮ 
ವಿಧವೆಯಾದರು (೧೯೩೧). ದೈಹಿಕವಾಗಿ ಮಾನಸಿಕವಾಗಿ ಸಾಮಾಜಿಕವಾಗಿ 
ಕುಗ್ಗಿದರು. ಅಂದು ವಿಧವೆಯ ಸ್ಥಿತಿ ಆಶಾದಾಯಕವಾಗಿರಲಿಲ್ಲ. 
ಕೇಶಮುಂಡನ, ಕೆಂಪುಸೀರೆ, ಅಡುಗೆ ಮನೆಯ ಒಂದು ಮೂಲೆಯ ವಾಸ. 
ಗೃಹಬಂಧನದ ವಾತಾವರಣ. ಏಕಾಂತ ಜೀವನ ಹಗುರಗೊಳಿಸಿಕೊಳ್ಳಲು 
ಮೊಮ್ಮಗಳು ವಾಗೀಶ್ವರಿಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ತೀರ್ಮಾನ. 
ಅಗಾಧವಾದ ಜ್ಞಾಫಕಶಕ್ತಿಯಿದ್ದ ಮೊಮ್ಮಗಳಿಗೆ, ತಾವು ಕಲಿತಿದ್ದ ಸಂಪ್ರದಾಯದ 
ಹಾಡುಗಳನ್ನು ಕಲಿಸುವ ಬಯಕೆ. ಮೊಮ್ಮಗಳಿಗೂ ಕಲಿಯುವ ಆಸೆ. 
ಬೆಳಿಗ್ಗೆ ಸಂಜೆ ಎರಡೆರಡು ಗ೦ಟೆ ಮೌಖಿಕ ಹಾಡುಗಳ ಪಾಠ. ಪೂರ್ವದಿಕ್ಕಿಗೆ 
ಮುಖಮಾಡಿ ಕೂರಬೇಕು. ಅಜ್ಜಿ ಹಾಡುವುದನ್ನು ಕೇಳಬೇಕು. ಅಜ್ಜಿಯ 
ಬಾಯಿಯನ್ನು ಗಮನಿಸಬೇಕು. ಅಜ್ಜಿ ಹ್ಞೂ ಅಂದಾಗ ಬಾಯಿತೆರೆದು 
ಹಾಡಬೇಕು. ಕಲಿತಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕಾದಶಿ, ಶಿವರಾತ್ರಿ, 
ಯಷಿಪಂಚಮಿ ಜಾಗರಣೆ ಸಮಯದಲ್ಲಿ ಉಪವಾಸವಿದ್ದು, ಶ್ರದ್ದೆಯಿಂದ 
ನೆರೆದ ಮಹಿಳೆಯರ ಮುಂದೆ ಹಾಡಿ ಸೈ ಎನಿಸಿಕೊಳ್ಳಬೇಕು. ಅಜ್ಜಿ ಹೇಳಿಕೊಟ್ಟ 
ಹಾಡಿನ ನೆಲೆಯನ್ನು ರಾಗವನ್ನು ಕರಗತಮಾಡಿಕೊಳ್ಳುವುದು ಸಲೀಸಾಯಿತು. 
ಐದನೆಯ ವಯಸಿಗೇ "ಬಬ್ರುವಾಹನ ಕಾಳಗ' ದಂತಹ ಯಕ್ಷಗಾನ ಕಾವ್ಯ 
ಕಂಠಪಾಠವಾಯಿತು. ಯಾವ ಭಯವಿಲ್ಲದೆ ಸರಾಗವಾಗಿ ಹಾಡುವ ಧೈರ್ಯ 
ಬಂತು. ಅಜ್ಜಿಯ ಹಾಡುಗಳಲ್ಲ ಮೊಮ್ಮಗಳ ಸ್ಪತ್ತಾದವು. 


0 ವಾಗೀಶ್ವರಿ ಶಾ 


(2° 


ಅಜ್ಜಿಯಲ್ಲಿದ್ದ ಹಾಡುಗಳನ್ನೆಲ್ಲಾ ಕಲಿತಮೇಲೆ, ಮುತ್ತಜ್ಜಿ 
ಶೇಷಮ್ಮನವರಲ್ಲಿದ್ದ ಹಾಡುಗಳನ್ನೂ ಅಕ್ಕಪಕ್ಕದ ಮಹಿಳೆಯರಲ್ಲಿದ್ದ 
ಹಾಡುಗಳನ್ನೂ ಕಲಿತು ನೆನಪಿಟ್ಟುಕೊಳ್ಳುವ ಹುರುಪು ಹೆಚ್ಚಿತು. 
ವೈವಿಧ್ಯಮಯವಾದ ಹಾಡುಗಳು ಹೃದ್ಧತವಾದವು. ಸಂಬಂಧಿಕರ ಮನೆಯಲ್ಲಿ 
ಹೆಣ್ಣು ಯತುಮತಿಯಾದರೆ. ಬಸುರಿಯಾದರೆ. ಮಕ್ಕಳ ನಾಮಕರಣವಾದರೆ, 
ಹಬ್ಬ ಹರಿದಿನವಾದರೆ ಹೋಗಿ ಸಂದರ್ಭಕ್ಕೆ ತಕ್ಕಂತೆ ಧಾರ್ಮಿಕ ಹಾಡುಗಳನ್ನು 
ಹಾಡುವ ಪರಿಪಾಠ ಉ೦ಟಾಯಿತು. ಪುಟ್ಟ ಹುಡುಗಿಯ ಹಾಡುಗಾರಿಕೆಗೆ 
ಹಿರಿಯರು ಮೆಚ್ಚಿ ತಲೆದೂಗಿದರು. 

ಬಾಲಕಿ ವಾಗೀಶ್ವರಿಗೆ ಅಜ್ಜಿಯ ಮನೆಯಲ್ಲಿದ್ದಾಗ ಪ್ರಾಥಮಿಕ ಶಿಕ್ಷಣ 
ಪ್ರಾರಂಭವಾಯಿತು. ಮನೆಯಲ್ಲಿ ಅಜ್ಜಿಯಿಂದ ಸಾಂಪ್ರದಾಯಿಕ ಹಾಡುಗಳ 
ಶಿಕ್ಷಣ, ಹೊರಗೆ ಶಾಲೆಯಲ್ಲಿ ಆಧುನಿಕ ಶಿಕ್ಷಣ. ತಂದೆಗೆ ಮಂಡ್ಯಕ್ಕೆ 
ವರ್ಗವಾಯಿತು (೧೯೩೬). ತಂದೆಯೊಡನೆ ಮಂಡ್ಯಕ್ಕೆ ಬಂದ ವಾಗೀಶ್ವರಿ 
ಮಂಡ್ಯದಲ್ಲಿ ಪ್ರಾಥಮಿಕ ನಾಲ್ಕನೇ ತರಗತಿಗೆ ಸೇರಿ, ಅನಂತರ ಮಾಧ್ಯಮಿಕ 
ಶಾಲೆಯ ಶಿಕ್ಷಣವನ್ನೂ ಮುಗಿಸಿದಳು. ಲೋಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ 
ತೇರ್ಗಡೆಯಾದಳು. ಮಂಡ್ಯದಲ್ಲಿ ಸಂಗೀತ ಅಭ್ಯಾಸವನ್ನೂ ಮಾಡಿದಳು. 
ಕಾರಣಾಂತರದಿಂದ ಹೆಚ್ಚು ವಿದ್ಯಾಭ್ಯಾಸ ಮಾಡಲು ಆಗಲಿಲ್ಲ. 

ಮಂಡ್ಯದಲ್ಲಿ ಹೊಸಹಳ್ಳಿ ಬಡಾವಣೆಯಲ್ಲಿ ಮಹಿಳಾ ಸಮಾಜವಿತ್ತು 
ಬಿ.ಎಂ. ಶ್ರೀಕಂಠಯ್ಯನವರ ಕೊನೆಯ ಸಹೋದರ ಕೃಷ್ಣಸ್ತಾಮಿಯವರ ಹೆಂಡತಿ 
ತಂಗಮ್ಮ ಸಮಾಜದ ಕಾರ್ಯದರ್ಶಿ. ಅವರ ಹೆಣ್ಣುಮಕ್ಕಳು ಪ್ರಭಾವತಿ, 
ಲೇಖಕಿಯರಾದ 'ತ್ರಿವೇಣಿ' ಮತ್ತು ಆರ್ಯಾಂಬ. ತ್ರೀವೇಣಿಯವರಿಗೆ ಅಸ್ತಮಾ 
ಖಾಯಿಲೆಯಿತ್ತು. ಅವರು ಚುರುಕಾಗಿರಲಿಲ್ಲ. ಆದರೆ ಪ್ರಭಾವತಿ 
ಲವಲವಿಕಿಯಿಂದಿದ್ದರು. ಆಕೆ ವಾಗೀಶ್ಪರಿ ಅವರ ಸಹಪಾಠಿ. ಮಂಡ್ಕದ 


ವಾಗೀಶ್ವರಿ ಶಾಸ್ತ್ರಿ 1 
ಮುನಿಪಲ್‌ ಹೃಸ್ಕೂಲಿನ ನಲಿದಾ ಗ ಭಿ ವಂಕಟಸುಬ್ಬಂಯ್ಯನವರು 


ನ ನಾ 


ಮಂಡ್ಯದ ಮಹಿಳಾ ಸಮಾಜ ಹಲವು ಸಾಂಸ್ಕೃತಿಕ ಸಂಗೀತ 


ಆ 


ಕಾರ್ಯಕ್ರಮಗಳನ್ನು ನಡೆಸುತ್ತಿತ್ತು ಹಾಡಿನ ಕಾರ್ಯಕ್ರಮಗಳಲ್ಲೆಲ್ಲಾ ವಾಗೀಶ್ವರಿ 
ಇರುತ್ತಿದ್ದರು. ಆಗ ಅಭಿನಯಿಸುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ನಾರದನ 
ಪಾತ್ರ ಅಭಿನಯಿಸುತ್ತಿದ್ದರು. ಇಂಪಾಗಿ ಹಾಡುತ್ತಾಳೆ ಅಂತ ನಾರದನ ವೇಷ 
ಸಿಗುತ್ತಿತ್ತು. ಮ೦ಡ್ಯದಲ್ಲಿ ನಡೆದ ವಕೀಲರ ಸಮ್ಮೇಳನ ಮೊದಲಾದ ಸಭೆ 
ಸಮಾರಂಭಗಳಲ್ಲಿ ವಾ ವಾಗೀಶ್ವರಿಯ ಹಾಡುಗಾರಿಕೆ-ಮುಖ್ಯವಾಗಿ ಪಾರ್ಥನಾಗೀತೆ- 
ಇರುತ್ತಿತ್ತು. 


ಮಂಡ್ಯ ಜಿಲ್ಲೆಯ ಪ್ರಾ ಪ್ರಾರಂಭೋತವ. ಮಹಾರಾಜ ನಾಲ್ವಡಿ ಕೃಷ್ಣರಾಜ 
ಒಡೆಯರಿಂದ ಉದ್ಭಾಟನೆ, ಆ ಸಭೆಯಲ್ಲಿ ವಾಗೀಶ್ವರಿ ಮಹಾರಾಜರ 
ಸ್ತುತಿಗೀತೆಯನ್ನು ಪ್ರಾರ್ಥನಾ ಗೀತೆಯಾಗಿ ಹಾಡಿದರು: 


"ಯದುವಂಶ ನೃಪಲಲಾಮನ ಜಯ ಹೇ 
ಆ ಶಿ 
ನಾಲ್ವಡಿ ಕೃಷ್ಣ ನೃಪಾಲ Ne 


ಅದು "ಜನಗಣಮನ ಅಧಿನಾಯಕ ಜಯ ಹೇ” ಧಾಟಿಯ ಹಾಡು. ಹಾಡನ್ನು 
ಕೇಳಿ ಮೆಚ್ಚಿ, 'ಸಭೆಗೆ ಬಂದಿದ್ದ ಕಾ೦ತರಾಜೇ ಅರಸ್‌ ಅವರು ಅರಮನೆಯಲ್ಲಿ 
ಬ೦ದು ಹಾಡಬೇಕು ಎಂದರು. ವಾಗೀಶ್ವರಿ ಹೆದರಿಕೊಂಡು ಅರಮನೆಗೆ 
ಬರುವುದಿಲ್ಲ ಎಂದರು! 


ಮಂಡ್ಯ ಜಿಲ್ಲಾ ಆಸ್ಪತ್ರೆಯನ್ನು ದಿವಾನ್‌ ಮಿರ್ಜಾ ಉದ್ರಾಟಿಸಿದರು. 
ಅಂದಿನ ಕಾರ್ಯಕ್ರಮದಲ್ಲೂ ವಾಗೀಶ್ವರಿ ಸುಶ್ರಾವ್ಯವಾಗಿ ಹಾಡಿ ಮೆಚ್ಚುಗೆ 


8 ವಾಗೀಶರಿ ಶಾಸಿ 
ವ ತಿ 


ಗಳಿಸಿದರು. ಅವರ ಬಾಲಪ್ರತಿಭೆಗೆ ಮಂಡ್ಯದ ಹಲವು ಸಾಂಸ್ಕೃತಿಕ 
ಕಾರ್ಯಕ್ರಮಗಳು ಇಂಬಾದವು. ಅವರಿಗೂ ಅವರ ಅಜ್ಜಿ ಸುಬ್ಬಮ್ಮನವರಿಗೂ 
ಮಂಡ್ಯದ ಪ್ರಾಚೀನ ಅಶ್ವತ್ಥವೃಕ್ಷವೊ೦ದು ಸನಾತನ ಸಂಸ್ಕೃತಿಯ ಸಂಕೇತವಾಗಿ 
ನೆನಪಿನಲ್ಲಿ ಉಳಿಯಿತು. 


ವಾಗೀಶ್ವರಿ ಅವರಿಗೆ ಹದಿನಾಲ್ಕನೇ ವಯಸ್ಸಿಗೆ ಮದುವೆಯಾಯಿತು 
(೧೯೪೦). ಆಗ ಬಾಲ್ಯವಿವಾಹದ ಕಾಲ. ಅಜ್ಜಿ ಸುಬ್ಬಮ್ಮನವರೇ ನಿಂತು 
ಮದುವೆ ಮಾಡಿದರು. ಮೈಸೂರು ಅರಮನೆ ವಿದ್ವಾಂಸರಾಗಿದ್ದ ಹರಿಕಥೆ 
ಎದ್ವಾನ್‌ ಕೊಣನೂರು ಶ್ರೀಕ೦ಠಶಾಸ್ತಿಗಳ ಎರಡನೆಯ ಮಗ ಕೊಣನೂರು 
ರಾಮಕೃಷ್ಣ ಶಾಸ್ತ್ರಿಯವರು ವಾಗೀಶ್ರರಿಯವರ ಗಂಡ. ಅವರು ಸರ್ಕಾರದ 
ಮಾಧ್ಯಮಿಕ ಶಾಲೆಯ ಶಿಕ್ಷಕರಾಗಿದ್ದರು. ಆಗಾಗ ವರ್ಗಾವಣೆಯ ಕೆಲಸ. 
ಗಂಡನೊಡನೆ ಬೇರೆಬೇರೆ ಊರುಗಳಲ್ಲಿ ವಾಗೀಶ್ವರಿ ಅವರ ವಾಸ. ರಾಮಕೃಷ್ಣ 
ಶಾಸ್ತಿಗಳಿಗೆ ಅಧ್ಯಾಪನದ ಜೊತೆಗೆ ಸಂಗೀತ ಪರಿಣತಿಯಿತ್ತು. ಅದು ಅವರ 
ತಂದೆಯ ಬಳುವಳಿ. ಗಂಡನ ಸಂಗೀತಜ್ಞಾನ ಹೆಂಡತಿಗೆ ವರದಾನವಾಯಿತು. 
ಎಲ್ಲಾ ಸಂಪ್ರದಾಯಸ್ಥ ಬ್ರಾಹ್ಮಣ ಮಹಿಳೆಯರಂತೆ ಅತ್ತೆ ಕಣಗಾಲು ಶಾರದಮ್ಮ 
ಹಾಡುಗಳ ಗಣಿ. ವಾಗೀಶ್ವರಿ ಶಾಸ್ತ್ರಿ ಅವರ ಹಾಡುಗಳನ್ನೂ 
ತಮ್ಮದಾಗಿಸಿಕೊಂಡರು. ಹಾಡು, ಹಾಡುಗಾರಿಕೆ, ಗೃಹಕ್ಕತ್ಯದೊಡನೆ 
ಸಮರಸವಾಯಿತು. 


ವಾಗೀಶ್ವರಿ ದಂಪತಿಗಳಿಗೆ ಎ೦ಟುಜನ ಮಕ್ಕಳು: ಶೈಲಜ, 
ಅನ್ನಪೂರ್ಣ, ನಾಗರಾಜ, ವಿಜಯಲಕ್ಷ್ಮಿ ಶ್ರೀಕಂಠಮೂರ್ತಿ, ಗೀತ, ನರಸಿಂಹ 
ಪ್ರಸಾದ್‌ ಮತ್ತು ವೀಣಾ. ದೊಡ್ಡಸಂಸಾರ. ಅದನ್ನು ನಿರ್ವಹಿಸುವುದರಲ್ಲೇ 
ಸಮಯ ವ್ಯಯವಾಗುತ್ತಿತ್ತು. ಅದನ್ನು ನಿರ್ಲಕ್ಷಿಸುವುದು ಸಾಧ್ಯವಿರಲಿಲ್ಲ. 


ವಾಗೀತರಿ ಶಾಸಿ 9 
ದ ಮಿ 


ಅದೇ ಬದುಕಿನ ಸರ್ವಸ್ಥವ ವೆಂಬಂತೆ ಹೊಂದಿಕೊಂಡರು. ಮಕ್ಕಳೆಲ್ಲಾ 
| ವಿದ್ಯಾವಂತರಾಗಲು, ಸು ಸುಸಂಸ್ಕೃತರಾಗಲು ಶ್ರಮಿಸಿದರು. ತಮಗಿಲ್ಲದ ಉನ್ನತ 
ವ್ಯಾಸಂಗದ ಕೊರತೆ ಮಕ್ಕಳಿಗಾಗದ೦ತೆ ನೋಡಿಕೊಂಡರು. ಗಂಡನ 
ವರ್ಗಾವಣೆ ಕೆಲಸದೊಡನೆ ಬೇರೆ ಬೇರೆ ಊರುಗಳಿಗೆ ಹೋಗಬೇಕಾದುದರಿಂದ 
ಹಲವು ಕ್ಷೇತ್ರದ, ಹಲವು ಮಹನೀಯರ ಪರಿಚಯವಾಗಲು ಕಾರಣವಾಯಿತು. 
ವಾಗೀಶ್ವರಿ ಅವರಿಗೆ ೧೯೬೨ರ ದಶಕದಲ್ಲಿ ಸಾಹಿತ್ಯ ರಚನೆಯ 
ಕಡೆಗೆ ಮನಸ್ಸು ಒಲಿಯಿತು. ತಾವು ಕಲಿತ ಸಂಪ್ರದಾಯದ ಹಾಡುಗಳ 
ಹಿನ್ನೆ ಲೆಯಲ್ಲಿ ಸಂಪದಾ ದಾಯ ಆಚರಣೆ ಕುರಿತು, ಕಿರು ಲೇಖನಗಳನ್ನು ಬರೆದು 
ಪತ್ರಿಕೆಗಳಿಗೆ ಕಳುಹಿಸಲು ಮೊದಲುಮಾಡಿದರು. ಅವು ಪ್ರಕಟವಾದಾಗ 
ಖುಷಿಗೊ೦ಡರು. ಉತ್ಸಾಹ ನೂರ್ಮಡಿಸಿತು. ಆಕಾಶವಾಣಿಯಲ್ಲಿ 
ಸೆರಿಪ್ರದಾಯಗೀತೆಗಳ ಹಾಡುಗಾರಿಕೆಗೆ ಅವಕಾಶ ಸಿಕ್ಕಿದಾಗ, ತಾವು 
ಹಾಡುಕಲಿತದ್ದು ಸಾ ಸಾರ್ಥಕವಾಯಿತು ಎನಿಸಿತು. ತಾವು ಕಲಿತಿದ್ದನ್ನು ಆಸಕ್ತರಿಗೆ 
ಕಲಿಸಲು ಪ್ರಾರಂಭಿಸಿದರು. ಸಂಗೀತ ಕಲಿಕೆಗೆ ಮನಸ್ಸುಮಾಡಿದ್ದು, 
ಸಂಗೀತಜ್ಞಾನದವರ ಮನೆಗೆ ಸೊಸೆಯಾದದ್ದು ಉಪಯೋಗಕ್ಕೆ ಬಂತು. ಹೆಚ್ಚು 
ವಿದ್ಯಾವಂತೆಯಲ್ಲದಿದ್ದರೂ ಓದುಬರಹ ತಿಳಿದಿದ್ದುದರಿ೦ದ ತಾವು ಕಂಠಸ್ಥ 
ಮಾಡಿಕೊಂಡಿದ್ದ ಮೌಖಿಕ ಪರಂಪರೆಯ ಅಸಂಖ್ಯಾತ ಹಾಡುಗಳನ್ನು 
ಅಕ್ಷರರೂಪಕ್ಕಿಳಿಸಿ ಬರೆದಿಡಲು ಪ್ರಯತ್ನಿ, ಸಿದರು. ಅದು ಸಾವಿರಾರು ಪುಟಗಳ 
ಸಾಹಿತ್ಯವಾಯಿತು. ಅದೇ ಹೃ ದಯ ಸಂಪುಟ”- ದ : ಸಂಪ್ರದಾಯ ಹಾಡುಗಳ 
ತಿಚೊ ಕಲಿತಿದ್ದ ಹಾಡುಗಳನ್ನು "ಬರೆದಿಡಲು ಪ್ರಾಧ್ಯಾಪಕ ಜಿ. ಅಶ್ವತ್ಥ 
ನಾರಾಯಣರು ಪೇರಣೆನೀಡಿದರೆಂದು ದಾಖಲಾಗಿದೆ. 


ವಾಗೀಶರಿ ಆವರು ಹೃದಯ : ಸಂಪುಟ ಬ ಹತ್‌ ಪುಸ್ತಕ ಪ್ರಕಟಣೆಗೆ 
ಸಾಕಷ್ಟು ಶ್ರಮಪ ಟ್ರರು. ಕನ್ನಡ' ಮತ್ತು ಸಂಸ್ಕ 3 ನಿರ್ದೇಶನಾಲಯದ 


10 ವಾಗೀಶ್ವರಿ ಶಾಸಿ 
ಮೆ 


ಸಹಾಯ್ದಧನ ಹಾಗೂ ಕೆನರಾ ಬ್ಯಾಂಕ್‌ನಿಂದ ಪಡೆದ ಸಾಲದ ಹಣದಿಂದ, 
"ವಾಗ್ದೇವಿ ಕಲಾನಿಕೇತನ” ಎ೦ಬ ಸ್ವಂತ ಪ್ರಕಾಶನ ಸಂಸ್ಥೆಯಿಂದ ಗ್ರಂಥವನ್ನು 
ಪ್ರಕಟಿಸಿದರು. ಸುಪ್ರಸಿದ್ಧರಿಂದ ಬಿಡುಗಡೆ ಕಾರ್ಯಕ್ರಮ ನಡೆಯಿತು 
(೧೫.೪.೧೯೮೫). ಅಂದಿನ ಕಾರ್ಯಕ್ರಮದಲ್ಲಿ ಡಾ. ಗೊರೂರು ರಾಮಸ್ವಾಮಿ 
ಅಯ್ಯಂಗಾರ್‌, ಡಾ. ಜೀ.ಶ೦. ಪರಮಶಿವಯ್ಯ, ನಿಟ್ಟೂರು ಶ್ರೀನಿವಾಸರಾವ್‌, 
ಪ್ರೊ. ಚಿ.ನ್ನ ಮಂಗಳ ಭಾಗವಹಿಸಿದರು. ಪುಸ್ತಕದ ಬಗೆಗೆ ಅತ್ಯುತ್ತಮ 


ಎ 


ಪ್ರತಿಕ್ರಿಯೆ ಬಂತು. 


ಮೌಲಿಕವಾದ "ಹೃದಯ ಸಂಪುಟ' ಗೀತಗುಚ್ಛ ಗ್ರಂಥವನ್ನು ಕುರಿತು 
ಖ್ಯಾತ ಬರಹಗಾರರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ 
ಹೀಗೆ “ಮುನ್ನುಡಿ'ದಿದ್ದಾರೆ : 

“ಶ್ರೀಮತಿ ವಾಗೀಶ್ವರಿ ಶಾಸ್ತ್ರಿಯವರು ಈ ಬೃಹತ್‌ ಕೃತಿಯನ್ನು 
ನೀಡಿ ಕನ್ನಡ ನುಡಿ ಮತ್ತು ನಾಡಿಗೆ ಅಪೂರ್ವವಾದ ಸೇವೆಯನ್ನು ಸಲ್ಲಿಸಿದ್ದಾರೆ. 
ಇದು ಅವರ ಜೀವಮಾನದ ಸಾಧನೆಯ ಫಲ... ಈ ಹಾಡುಗಳನ್ನು ನಾವು 
ಶಿಷ್ಟ ಜಾನಪದವೆಂದು ಕರೆಯಬಹುದು. ಇಲ್ಲಿ ಜನಜೀವನಕ್ಕೆ ಪ್ರಾಧಾನ್ಯ... 
ಮಹಿಳೆಯರು ತಮ್ಮ ಜೀವನಕ್ಕೆ ಉತ್ಸಾಹವನ್ನು ಹೊ೦ದಲು ಈ ಜನಪದ 
ಸಾಹಿತ್ಯವನ್ನು ರಚಿಸಿಕೊಂಡಿದ್ದಾರೆ... ಇವುಗಳನ್ನು ಅವರು ಬರೆಯದೆ ಪ್ರಕಟಿಸದೆ 
ಇದ್ದಿದ್ದರೆ, ಈ ಸಾಹಿತ್ಯದ ಬಹುಭಾಗ ನಷ್ಟವಾಗಿಹೋಗುತ್ತಿದ್ದಿತು”. 

ಕನ್ನಡ ಜಾನಪದದ ಪ್ರಥಮದರ್ಜೆಯ ಎದ್ವಾಂಸರಾದ ಡಾ. ಜೀ.ಶಂ. 
ಪರಮಶಿವಯ್ಯ ಅವರು "ಹೃದಯ ಸಂಪುಟ' ಗ್ರಂಥದ ಬಗೆಗೆ ಹೀಗೆ ಪ್ರತಿಕ್ರಿಯೆ 
ನೀಡಿದ್ದಾರೆ 

“ಸಂಪ್ರದಾಯದ ಪದಗಳು ನಮ್ಮ ಜನಪದ ಸಾಹಿತ್ಯದ ಒಂದು 
ಅ೦ಗವಾಗಿ ಪರಿಗಣಿತವಾಗಿವೆ... ಈ ಹಾಡುಗಳೆಲ್ಲ ಒಂದು ಕಾಲಕ್ಕೆ 


ವಾಗೀಶ್ಪರಿ ಶಾಸಿ 1] 
ಮೆ 


ಅವಿದ್ಯಾವಂತರೇ ಆಗಿದ್ದ ಬ್ರಾಹ್ಮಣ ಸ್ತ್ರೀಯರಲ್ಲಿ ಮೌಖಿಕ ಮೂಲವನ್ನು 
ಅನುಸರಿಸಿ ತಲೆಮಾರಿನಿ೦ದ ತಲೆಮಾರಿಗೆ ಸಾಗಿಬ೦ದಿವೆ. ಇವುಗಳ ಕರ್ತೃತ್ವ 
ಅಜ್ಞಾತವಾಗಿಯೇ ಉಳಿದಿದೆ. ಈ ಹಾಡುಗಳನ್ನು ಚಾರಿತ್ರಿಕ ಭೌಗೋಳಿಕ 
ರೂಪ ಪಗಳಲ್ಲಿ ಗುರುತಿಸಬಹುದಾಗಿದೆ :ಎ೦ದಾಗ ಇವು ಜನಪದ ಸ ಸಾಹಿತ್ಯಕ್ಕೆ 
ಸಹಜವಾದ ಪ್ರಸರಣಗುಣವನ್ನು ಸಾಧಿಸಿಕೊಂಡಿವೆ... "ಸಂಪ್ರದಾಯದ ಪದಗಳು' 
ಮನೆಯ ಹಿತ್ತಲಲ್ಲಿ ಬೆಳೆದ ಕೈದೋಟದ ಮಲ್ಲಿಗೆ ಜಾಜಿಗಳಂತೆ, ಗ್ರಾಮೀಣ 
ಪ್ರದೇಶದ ಜನಪದ ಸಾಹಿತ್ಯ ಬಯಲು ವಿಸ್ತಾರದಲ್ಲಿ ಹರಡಿಕೊಂಡ ತೆಂಗಿನ 
ಬನದಂತೆ.... ಎದ್ಯಾವಂತ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ಇಂಥ 
ಒ೦ದು ಸಾಹಿತ್ಯ ಪರಂಪರೆ ಹೆಣ್ಣು ಮಕ್ಕಳಲ್ಲಿ ಉಳಿದುಬ೦ದಿರುವುದು ಸೋಜಿಗದ 
ಎಷಯವಾಗಿದೆ..... ಶ್ರೀಮತಿ ವಾಗೀಶ್ವರಿ ಅವರು ಸ೦ಪ್ರದಾಯದ ಪದಗಳ 
ಒ೦ದು ಪುಟ್ಟ ವಿಶ್ವಕೋಶವನ್ನೇ ಸಿದ್ಧಗೊಳಿಸಿ ನಮಗೆ ನೀಡಿದ್ದಾರೆ. ಅವರದು 
ಮುಗಿಯದ ಭಂಡಾರ.” 


ಸಂಪ್ರದಾಯದ ಹಾಡುಗಳ ಬಗೆಗೆ ವಾಗೀಶ್ವರಿ ಶಾಸ್ತ್ರಿಯವರು ಹೀಗೆ: 


“ಸಂಪ್ರದಾಯದ ಹಾಡುಗಳು ನನಗೆ ಹುಟ್ಟಿನಿ೦ದಲೇ ಅ೦ಟಿಕೊ೦ಡು 
ಬಂದವು... ನಮ್ಮ ಪ್ರಾಚೀನ ಪರಂಪರೆಯನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದೇ 
ಚಿಂತೆ... ನಮ್ಮ ಮುತ್ತಜ್ಜಿ, ಅಜ್ಜಿಯವರಿ೦ದ ಹರಿದುಬಂದ ಈ ಸಂಪತ್ತನ್ನು 
ಈಗಿನ ಕಾಲಕ್ಕೆ ಅನುಕೂಲಿಸುವಂತೆ ಬರವಣಿಗೆಯ ಮೂಲಕವಾದರೂ 
ಬಿಟ್ಟುಹೋಗುವ ಚಪಲ..... ಸಂಪ್ರದಾಯದ ಹಾಡುಗಳು ನಮ್ಮ ಗೃಹಿಣಿಯರ 
ದೈನಂದಿನ ಆಚಾರ ವಿಚಾರಗಳಲ್ಲಿ ಹೇಗೆ ಹಾಸುಹೊಕ್ಕಾಗಿ ಬೆರೆತುಕೊಂಡಿದ್ದವು 


ಲ 
ಎ೦ಬುದನ್ನು ತಿಳಿಸುವುದೇ ಈ ಗ್ರಂಥದ ಉದ್ದೇಶ..... ಈ ಹಾಡುಗಳನ್ನೆಲ್ಲಾ 


12 ವಾಗೀಶ್ರರಿ ಶಾಸ್ತ್ರ 
ಬಾಯಿಪಾಠವಾಗಿ ಕಲಿತು ಉಳಿಸಿದುದರಿಂದ ಈ ಸಾಹಿತ್ಯವೆಲ್ಲಾ ವಾಕ್‌ 
ಸಂಪ್ರದಾಯವಾಗಿ ರೂಪುಗೊಂಡಿತು. 


ನಮ್ಮ ಹಿಂದಿನವರ ಸಂಪ್ರದಾಯಗಳನ್ನೆಲ್ಲಾ ಜನಸಾಮಾನ್ಯರು 
ನಡೆಸಿಕೊಂಡು ಬಂದದ್ದರಿಂದ ಆಯಾಯ ಸಂಪ್ರದಾಯಗಳು ಆಯಾಯ 
ಗುಂಪಿನಲ್ಲಿ ಬಳಕೆಯಲ್ಲಿದ್ದುದು ಗೋಚರವಾಗುತ್ತದೆ. ಹೀಗೆಯೇ ಈ 
ಜನಸಮೂಹವು ಹಾಡಿಕೊ೦ಡು ಬ೦ದ ಹಾಡುಗಳು ಜನಪದ ಹಾಡುಗಳಂದು 
ತಿಳಿಯಬಹುದಾಗಿದೆ... ಅವರವರ ಕುಲದೈವ ಮತ್ತು ಇಷ್ಟದೇವರನ್ನು 
ಭಕ್ತಿಯಿ೦ದ ಭಜಿಸುವುದಕ್ಕೆ ಈ ಸ೦ಪ್ರದಾಯ ಹಾಡುಗಳು ಸಹಾಯಕವಾಗಿವೆ 
ಎನ್ನಲಡ್ಡಿಯಿಲ್ಲ.... ಹಿ೦ದೆ ಕಂಠಸ್ಥವಾಗಿ ಕಲಿಯುತ್ತಿದ್ದ ಇಂತಹ ಹಾಡುಗಳನ್ನು 
ಅಕ್ಷರ ಕಲಿತ ಮೇಲೆ ಪ್ರತಿಯೊಬ್ಬ ಗೃಹಿಣಿಯೂ ತನ್ನದೇ ಆದ ಒಂದೊಂದು 
ಹಾಡಿನ ಪುಸ್ತಕವನ್ನು ಹೊಂದಿದ್ದು, ಅದನ್ನು ತನ್ನ ಒಡವೆಗಿಂತ ಹೆಚ್ಚಾಗಿ 
ಕಾಪಾಡಿಕೊಳ್ಳುತ್ತಿದ್ದಳು... ಈ ಎಲ್ಲಾ ಭಾಗದ ಹಾಡುಗಳಿಗೂ ಮೂಲಧಾಟಿಯಲ್ಲಿ 
ರಾಗತಾಳಗಳನ್ನು ಗುರುತಿಸಲಾಗಿದೆ. ಪದ್ಯಗಳ ಮಧ್ಯೆ ಗೀಟುಗಳನ್ನು 
ಹಾಡುವಾಗಿನ ತಾಳಗಳ ಲೆಕ್ಕಾಚಾರದಂತೆ ಹಾಕಲಾಗಿದೆ. ಹಾಡುವವರು 
ಅರ್ಥಕ್ಕೆ ಸರಿಹೊಂದಿಸಿಕೊಂಡು ಮೂಲಧಾಟಿ ಬಿಡದಂತೆ ಹಾಡಿಕೊಳ್ಳಬೇಕೆಂದು 
ಏನಂತಿ”. 


೨೦೦೮ರಲ್ಲಿ ಹೃದಯ ಸಂಪುಟದ ಎರಡನೆಯ ಮುದ್ರಣ 
ಪ್ರಕಟವಾಯಿತು. ಅದರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಿಘಂಟು 
ತಜ್ಞ ಪ್ರೂ. ಜಿ. ವೆಂಕಟಸುಬ್ಬಯ್ಯ, ಉದ್ಯಮಿ ಸಿ.ವಿ.ಎಲ್‌. ಶಾಸ್ತಿ, ಸಂಶೋಧಕ 
ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಜನಪದ ತಜ್ಞ ಪ್ರೊ ಡಿ. ಲಿಂಗಯ್ಯ, 
ಲೇಖಕಿ ಡಾ. ಕೆ.ಆರ್‌. ಸಂಧ್ಯಾ ರೆಡ್ಡಿ ಭಾಗವಹಿಸಿ ಗ್ರಂಥದ ಹಿರಿಮೆಯನ್ನು 
ಪರಿಚಯಿಸಿದರು. ದ್ವಿತೀಯ ಆವೃತ್ತಿಯಲ್ಲಿ ಕಥನ ಗೀತೆಗಳು ಹಾಗೂ 


ವಾಗೀಶ್ವರಿ ಶಾಸ್ತಿ 13 
ಮೆ 


ಮಕ್ಕಳ ಸಾಹಿತ್ಯದಲ್ಲಿ ಅಲ್ಪಸ್ವಲ್ಪ ಬದಲಾವಣೆಯಾಗಿದೆ. ಮೂರು 
ಕಥನಗೀತೆಗಳನ್ನು ಹೊಸದಾಗಿ ಸೇರಿಸಿದೆ. ಅವುಗಳಲ್ಲಿ "ಚೋರಕಥೆ' 
ಗಮನಾಯನವಾಗಿದೆ. ಅದರ ಸುದೀರ್ಫ್ಥವಾದ ವಿಮರ್ಶೆಯೂ ಇದೆ. 
ಅದರಲ್ಲಿ ಹಾಡುಗಾರ್ತಿ ವಾಗೀಶ್ಡರಿ ಶಾಸ್ತ್ರಿ ಅವರ “ಎಮರ್ಶಕಿ' ಮುಖವನ್ನು 


ಗುರುತಿಸಬಹುದು. 


ಸಂಗ್ರಾಹಕಿ, ಸಂಪಾದಕಿ, ಪ್ರಕಾಶಕಿ ಶ್ರೀಮತಿ ವಾಗೀಶ್ತರಿ ಶಾಸ್ತ್ರಿ 
ಅವರ "ಹೃದಯ ಸಂಪುಟ" ಸಂಪ್ರದಾಯದ ಹಾಡುಗಳ ವಿಶಿಷ್ಠ ಗ್ರಂಥ. 
ಒಂದು ಸಾವಿರದ ಒಂದು. ನೂರು ಪುಟಗಳಿಗೂ ಮೀರಿರುವ ಈ ದೊಡ್ಡ 
ಗಂಥದಲ್ಲಿ ಸಮ ಕ್ಯಾಟಿ ಸಂಪ್ರದಾಯದ ಹಾಡುಗಳಿವೆ. ೧೯೮೫ರಲ್ಲಿ 
ಮುದ್ರಣ ಕಂಡಿದೆ. ಎರಡನೆಯ ಮುದ್ರಣದಲ್ಲಿ ವಿಸ್ತಾರಗೊಂಡಿದೆ; ಹಲವು 
ಪೂರಕ ವಷಯಗಳನ್ನು ಒಳಗೊಂಡಿದೆ. ' ಡೆಮಿ ಆಕಾರದ ಬೃಹತ್‌ 
ಗ್ರಂಥ ಸೃಜನಶೀಲ ಮಹಾಕಾವ್ಯದಂತೆ. ಅಚ್ಚುಕಟ್ಟಾಗಿ, ಆಕರ್ಷಕವಾಗಿ, ಹೆಮ್ಮ 
ಪಡುವಂತೆ ಅಚ್ಚಾಗಿದೆ. ಬೆಲೆಯೂ ದುಬಾರಿಯಾಗಿಲ್ಲ. ಒಟ್ಟು ಗ್ರಂಥದಲ್ಲಿ 
ಶ್ರೀಮತಿ ವಾಗೀಶ್ವರಿ ಶಾಸ್ತ್ರಿಗಳ ಸದಭಿರುಚಿ, ಸಂಸ್ಕ ತಿಪ್ರೀತಿ, ಜನಪದ ಕಾಳಜಿ 
ಎದ್ದುಕಾಣುತ್ತದೆ. ಗಾತ್ರದಲ್ಲಿ, ಗುಣದಲ್ಲಿ WEE ಈ ಗಂಥ ಜನಪದ 
ಅಧ್ಯಯನಕಾರರಿಗೆ, ಹಾಡುಗಾರರಿಗೆ, ಸ೦ಸ್ಕೃತಿಸ೦ವಾದಕರಿಗೆ ಅಮೂಲ್ಯವಾದ 
ಕೊಡುಗೆಯಾಗಿದೆ. 


ವಾಗೀಶ್ವರಿ ಶಾಸ್ತ್ರಿಗಳ ಗಜಗಾತ್ರ ಗಂಥದಲ್ಲಿ, ಆರು ಪ್ರಮುಖ 
ವಿಭಾಗಗಳಿವೆ; ಮುನ್ನೂರ ಐವತ್ತಕ್ಕೂ ಮೇಲ್ಪಟ್ಟು ಚಿಕ್ಕ, ಸ, ದೊಡ್ಡ ಹಾಡುಗಳಿವೆ. 
ಹಾಡುಗಳನ್ನು ವಿಷಯವಾರು ವಿಂಗಡಿಸಿ, ಟಾಟ ಶೀರ್ಷಿಕೆ ನೀಡಿದೆ. 


14 ವಾಗೀಶ್ವರಿ ಶಾಸಿ 
ಮೆ 


ಉದಾಹರಣೆಗೆ : ಅಕ್ಕರಾಸ್ತೆಯ ಶಾಸ್ತ್ರದ ಹಾಡುಗಳು, ದೇವತಾ ಕಾರ್ಯಗಳಿಗೆ 
ಸಂಬಂಧಿಸಿದ ಹಬ್ಬದ ಹಾಡುಗಳು, ವ್ರತಕಥೆ ಹಾಡುಗಳು, ನಿತ್ಯಪಾರಾಯಣದ 
ಸೋತ್ರದ ಹಾಡುಗಳು, ಕಥನ ಗೀತೆಗಳು ಮತ್ತು ಮಕ್ಕಳ ಸಾಹಿತ್ಯ. 


ಇವುಗಳಲ್ಲಿ ವಿವಿಧ ಬಗೆಯ ಹಾಡುಗಳ ಉಪವಿಭಾಗಗಳೂ ಉ೦ಟು. 
ಉದಾಹರಣೆಗೆ : ಹೆಣ್ಣು ಮಗಳನ್ನು ಹಸೆಗೆ ಕರೆಯುವ ಹಾಡುಗಳು, ಗಂಡು 
ಮಕ್ಕಳನ್ನು ಹಸೆಗೆ ಕರೆಯುವ ಹಾಡುಗಳು, ತೊಟ್ಟಿಲು ಶಾಸ್ತ್ರದ ಹಾಡುಗಳು, 
ಚೌಲೋಪನಯನದ ಹಾಡುಗಳು, ಮದುವೆಯ ಹಾಡುಗಳು, ಉರುಟಣೆ 
ಹಾಡುಗಳು, ಬೀಗರ ಹಾಡುಗಳು, ಬಾಗಿಲು ತಡೆದ ಹಾಡುಗಳು, ಆರತಿ 
ಹಾಡುಗಳು, 'ಆಶೀರ್ವಾದದ ಹಾಡುಗಳು, ಲಾಲಿ ಹಾಡುಗಳು, ದೇವಿಯನ್ನು 
ಕುರಿತ ಹಾಡುಗಳು, ಹೂ ಬೇಡಿದ ಹಾಡುಗಳು, ತುಳಸೀ ಹಾಡುಗಳು 
ಮೊದಲಾದವು. ಎಲ್ಲವೂ ನಮ್ಮ ಪರಂಪರೆಯಿಂದ ಬಾಯಿಂದ ಬಾಯಿಗೆ 
ಹರಿದುಬಂದ ಸಾಹಿತ್ಯ ಸಂಪತ್ತು. ಎಷ್ಟೊಂದು ಹಾಡುಗಳು! ಎಷ್ಟೊಂದು 
ಆಚರಣೆಗಳು! ಹಾಡುಗಳಿಲ್ಲದ ಆಚರಣೆಗಳೇ ಇಲ್ಲವೇನೋ ಅನ್ನಿಸುತ್ತದೆ. 
ಎಲ್ಲವೂ ಸ್ತೀಯರ ಸ್ವತ್ತು. 


ವಾಗೀಶ್ವರಿ ಅವರು ಸಂಗೀತ ಪರಿಸರದಲ್ಲಿ ಬೆಳೆದುದರಿಂದ, ಸಂಗೀತ 
ಪ್ರಿಯರಾದುದರಿಂದ, ತಾವು ಕಲಿತ ಹಾಡುಗಳಿಗೆ ಹಾಡುಗಾರಿಕೆಯ ಚೌಕಟ್ಟನ್ನು 
ಸೂಚಿಸಿದ್ದಾರೆ; ರಾಗ ತಾಳಗಳನ್ನು ಹೆಸರಿಸಿದ್ದಾರೆ. ಶಿಷ್ಟ ಸಂಗೀತದಂತೆ 
ಜನಪದ ಸಂಗೀತಕ್ಕೂ ಸ್ಪಷ್ಟವಾದ ಮಟ್ಟಿನ ಪರಿಧಿಯಿರಬೇಕೆಂಬುದರತ್ತ ಇದು 
ಗಮನಸೆಳೆಯುತ್ತದೆ. ರಾಗ ತಾಳಗಳ ನಿಖರವಾದ ಸೂಚನೆಗೆ ಸಂಗೀತ 
ಪರಿಶ್ರಮವಿದ್ದ ಅವರ ಗ೦ಡ ಸಹಕರಿಸಿದ್ದಾರೆ. 


ವಾಗೀಶ್ವರಿ ಶಾಸಿ 15 
ಮೆ 


ಹಾಡನ್ನು ಕಲಿತವರ ಬಗೆಗೆ, ಪಡೆದವರ ಬಗೆಗೆ ವಿವರನೀಡಿದ್ದಾರೆ. 
ಹಾಡಿನ ಸಮಯ ಸಂದರ್ಭ ಸ್ವಾರಸ್ಯ ಸಾರಾಂಶ ವೈಶಿಷ್ಟ್ಯಗಳನ್ನು ತಿಳಿಸಿದ್ದಾರೆ. 
ಅಧ್ಯಯನಕಾರರಿಗೆ ವಿಫುಲವಾದ ಪೂರಕಟಿಪ್ಪಣಿ ಸಾಹಿತ್ಯವನ್ನು ಒದಗಿಸಿದ್ದಾರೆ. 
ಶ್ರೀಮತಿಯರ ಟಿಪ್ಪಣಿಗಳಲ್ಲಿ . ಕಂಡುಬರುವ ಒಳನೋಟ, ವೈಚಾರಿಕತೆ 
ಮನನೀಯವಾಗಿದೆ. ಸಾಮಾನ್ಯ ಅಕ್ಷರಜ್ವಾನದ ಅವರ ಲೋಕಾನುಭವ 
ಬೆರಗುಗೊಳಿಸುತ್ತದೆ. 


ವಾಗೀಶ್ವರಿ ಅವರು ಕ೦ಠಸ್ಥವಾಗಿ ಉಳಿಸಿ ಬರೆದು ಪ್ರಕಟಿಸಿರುವ 
ಹಾಡುಗಳ ಹುಟ್ಟಿನ ಕಾಲವನ್ನು ಗ್ರಹಿಸಲಾಗುವುದಿಲ್ಲ. ಪ್ರಾಚೀನ ಕಾಲದಿಂದ 
ಉಳಿದುಬಂದಿವೆ ಎಂದಷ್ಟೇ ಹೇಳಬಹುದು. ಕೆಲವು ಹಾಡಿನ ಧಾಟಿ(ರಾಗ) 
ಅತಿ ಪ್ರಾಚೀನ. ಹಲವು ಅನಂತರದವು. ಈ ಹಾಡುಗಳ ಸದುದ್ದೇಶ 
ಬಹುಮುಖಿಯಾದದ್ದು; ಸಮಾಜಮುಖಿಯಾದದ್ದು. ವಾಗೀಶ್ವರಿ ಅವರೇ 
ಹೇಳಿರುವಂತೆ, “ಇಂತಹ ಹಾಡು ಹಸೆಗಳು ಪ್ರಾಚೀನ ಕಾಲದ ಅತಿ ಸಾಮಾನ್ಯ 
ಮಹಿಳೆಯ ಜೀವನದಲ್ಲಿ ಹಾಸುಹೊಕ್ಕಾಗಿರುವ ಭಾಗವಾಗಿದ್ದವು. ಆಗಿನ 
ಕಾಲದಲ್ಲಿ ಮಹಿಳೆಗೆ ಈ ಹಾಡುಗಳು ಆಸ್ತೆ ಅಕ್ಕರೆ, ಜ್ಞಾನ, ಭಕ್ತಿ. ವೈರಾಗ್ಯಗಳಿಗೆ 
ಸಹಾಯವಾಗಿದ್ದುವಲ್ಲದೆ, ಪುರಾಣೇತಿಹಾಸಗಳ ಪರಿಚಯಕ್ಕೂ 
ಸಹಾಯಕವಾಗಿದ್ದವು.... ಸಂಪ್ರದಾಯದ ಹಾಡುಗಳ ವ್ಯಾಪ್ತಿ ಆಯಾ ಭಾಗಕ್ಕೆ 
ತಕ್ಕಂತೆ ಮೂರು ನುಡಿಗಳಿಂದ ಹಿಡಿದು ಮೂವತ್ತು, ಮುನ್ನೂರು, ಮೂರು 
ಸಾವಿರ ನುಡಿಗಳವರೆಗೂ ವಿಸ್ತಾರವಾಗಿವೆ”. 


ಪ್ರಸ್ತುತ ಸಂಪ್ರದಾಯದ ಹಾಡುಗಳು ಸಂಗೀತದ ಚೌಕಟ್ಟಿಗೆ ಒಳಪಟ್ಟಿವೆ. 
ಅವುಗಳಲ್ಲಿ ಮೌಖಿಕ ಪರಂಪರೆಯ ಜನಪದ ಧಾಟಿಯೂ ಶಾಸ್ತ್ರೀಯ ಸಂಗೀತದ 


16 ವಾಗೀಶ್ವರಿ 2 ಶಾ. 


ಟೆ 


ಶಿಷಧಾಟಿಯೂ ಮೇಳವಿಸಿವೆ. ಬ್ರಾಹ್ಮಣಸಮಾಜದ ಮಹಿಳೆಯರು ತಮ್ಮ 
ಹಾಡುಗಾರಿಕೆಯ ಸೆ ಸೌಲಭ್ಯಕ್ಕೆ ಸಹಜವಾ ನಗುವಂತೆ ದುಡಿಸಿಕೊಂಡಿದ್ದಾರೆ... ಈ 
ಗ್ರಂಥದ ಅಧಿಕ. ಹಾಡುಗಳು ಹಾಸನಜಿಲ್ಲೆಗೆ ಸಂಬಂಧಿಸಿರುವುದು 


"ಹೃದಯ ಸಂಪಹುಟ' ಸಂಪ್ರದಾಯ ಹಾಡುಗಳು ಗ್ರಂಥದ 
ಆರುಭಾಗಗಳಿಗೂ ಉಪಯುಕ್ತವಾದ, ಅಧ್ಯಯನಶೀಲವಾದ ಪ್ರಸ್ತಾವನೆಯಿದೆ. 
ಇದರಲ್ಲಿ ಆಯಾ ಸಂಪ್ರದಾಯದ ಹಾಡುಗಳ ಸಂದರ್ಭ, ಉದ್ದೇಶ, 
ಉಪಯೋಗ, ಅವುಗಳನ್ನು ಕಲಿಯುವ ಕ್ರಮ, ಶ್ರಮ, ಅರ್ಥ ಅಂತರಂಗ. 
ಮೊದಲಾದವುಗಳನ್ನು ಕುರಿತು ಹೇಳಿದೆ. ವಾಗೀಶ್ವರಿ ಅವರು ತಾವು. ಹಗೆ. 
ಹಾಡುಗಳನ್ನು ಕಲಿತರೆಂಬುಧನ್ನೂ ಯಾರಿಂದ ಯಾವಾ ನಗ. ಕಲಿತರೆಂಬುದನ್ಕೂ 
ಕಲಿಯಲು ಎಷ್ಟು ಸಮಯ ಬೇಕಾಯಿತೆಂಬುದನ್ನೂ ವಿವರಿಸಿದ್ದಾರೆ. ಇಂಥ 
ಹಾಡುಗಳನ್ನು ಕಂಠಪಾಠಮಾಡಿ. ಜ್ಞಾಪಕಶಕ್ತಿಯಿಂಧ ಉಳಿಸಿಕೊಂಡು.ಬರಲು 
ಸ್ತ್ರೀಯರು ಪಟ್ಟಿರುವ ಶ್ರಮ ತಾಳ್ಮೆ ಆಸಕ್ತಿ ವೈದ್ಯವಾಗುತ್ತದೆ. _ 


ಅಕ್ಕರಾಸ್ತೆಯ ಶಾ ಶಾಸ್ತ್ರದ ಹಾಡುಗಳನ್ನು ಕುರಿತು ಪಾಗೀಶ್ವರಿ.' ಶಾಸ್ತ್ರಿ 
ಹೀಗೆ ಹೇಳಿದ್ದಾರೆ : 


ಕ 


ಸ್ತದ ಹಾಡುಗಳು ಹಿಂದೆ ಗೃಹಿಣಿಯರ ' ಜೀವನದಲ್ಲಿ 
Saino ಸಾಧನವಾಗಿಯೂ ಜನಗಳಲ್ಲಿ 'ಒಡನಾಡುವ 
ಸದುದ್ದೇಶದಿಂದಲೂ ರಚಿತವಾದ ಅಗಾಧ ಸ ಸೃಷ್ಟಿಯಾಗಿವೆ. ಇವು ಶಾಸ್ತ್ರದ 
ಹಾಡುಗಳಾದರೂ ಈ ಶಾಸ್ತ್ರಗಳೆಲ್ಲಾ ಮನಬಂದಂತೆ ರಚಿಸಿದುವುವಲ್ಲ. 
ಇಷುಗಳಿಗಲ್ಲಾ ವೈಜ್ಞಾನಿಕ ಕಾರಣಗಳಿದ್ದು... ಕುತೂಹಲ 
ಕೆರಳಿಸುವಂತಹುಗಳಾಗಿವೆ”. 


ui 17 


ಹ ಜೂ 'ಜತೆಟು 


ಯಾಕೆ ಕಿರ್ಕಿರಿ: ಮಾಡ್ತಿ ರಂಗ. ನಿರಯನ ಬಟ್‌” 
:"ಎಷ್ಟ್ರು-ಛಲ-5ಹೋರುತೀ ಎರ ಪಲ್ಲವ ನಸ ಔ 


ಮಕಳು: ಮಾಣಿಕಪಲವೆ: ರೂಗಿ ರಯ ಮನ ಸಗದ ಬಧಿರು ಬರು 
4 ಸ ತುವ 5 ಕ 
ಹ 
ಬಟ್ಟಲ ಬಾರಿಸಲೇನೋ,. ೫ ಶ್ರೀ.- ಚ 
`` ಸೃಷ್ಣಾ ಬಾ, ಹಸೆಗೇ- ॥ ಕರದಾಥು.-. ಹ ಸಬರದ“ 


ww 


mT i ಲ್ಲ EE ಸಮಸ ಹ ಜರ್‌ 


ಹಸುರಂಗಿ ತೊಡಿಸಲೇನೋ । 
ಮೊಸರನ್ನ ಉಣಿಸಲೇನೋ ಕಪಿಯ 1 ಬಂದು ಮಿಯ ಸದರ 
ಹಸನಾದ ಕೊಳಲು; ಕೈಯಲಿ ಹಡಿದು ಯಜ ೪ 
ಕೂಸನ್ನು ಕುಣಿಸಲೇನೋ ಶ್ರೀ: ` ತ 
ಕೃಷ್ಣಾ ಬಾ ಹಸೆಗೇ: ॥ ಕರಾದಾರು- ವರಯ. ವರರ ಎ 
ಶಾಲು ಹೊದ್ದಿಸಲೇನೋ: ಠಂಸಾ |... 
ರಂಗ್‌ ರುಮಾಲ್‌ ಸುತ್ತಲೇನೋ |" 
ಅರಗಾನೆರೆಲ್ಲಾ ಮಗಳ (ಪಾಡ್‌ ಹ ಮ 
ಭಂಗವ ಪಡಿಸುವೆಯೇನೋ |ಶ್ರೀ॥ 
ರಂಗಾ ಬಾ ಹಸೇಗೇ ॥ ಕರಾದಾರು ಈ Wok 1 

ಸ 4 ಪುಟ-2೪” 


18 ವಾಗೀಶರಿ ಶಾಸಿ 
ದ ವಿ 


ದೇವತಾ ಕಾರ್ಯಗಳಿಗೆ ಸಂಬಂಧಿಸಿದ ಹಬ್ಬದ ಹಾಡುಗಳನ್ನು 
ವಾಗೀಶ್ವರಿ ಶಾಸ್ತ್ರಿ ಹೀಗೆ ಗ್ರಹಿಸಿದ್ದಾರೆ : 

“ಶಾಸದ ಹಾಡುಗಳ ಜಾಡಿನಲ್ಲಿಯೇ ಇರುವ ಈ ಹಾಡುಗಳು 
ಶಿವ ನಾರಾಯಣ ರಾಮ ಕೃಷ್ಣ ಪಾರ್ವತಿ ಲಕ್ಷ್ಮೀ ಶಾರದೆ ಮುಂತಾದ 
ದೇವರ ಮಹಿಮೆಗಳನ್ನು ಕುರಿತ ಹಾಡುಗಳಾಗಿವೆ. ಇವುಗಳ ಉಪಯೋಗ 


ಹಬ್ಬ ಹರಿದಿನಗಳ ಪೂಜೆ ಪುರಸ್ಕಾರಗಳಲ್ಲಿ ಬಹುಮುಖ್ಯವಾಗಿತ್ತು” 


ಹಬ್ಬದ ಹಾಡುಗಳಲ್ಲಿ ದ್ವಂದ್ವಾರ್ಥದ ಹಾಡುಗಳೂ ಉಂಟು. 
ಅಂಥವುಗಳಲ್ಲಿ “ಅವರೇ ಕಾಯ್‌ ಬೇಕು' ಎಂಬ ಹಾಡೂ ಒಂದು. ಅದು 
ನಾದನಾಮ ಕ್ರಿಯ ರಾಗ ಆದಿತಾಳದಲ್ಲಿದೆ: 


ಅವರೇ ಕಾಯ್‌ ಬೇಕು । ಕಾಲದೋ | 


ಳವರೇ ಕಾಯ್‌ ಬೇಕು ॥ಪಲ್ಲವಿ॥ 
ಅವರೇ ಸಂಪದ ಅವರೇ ಬಹುರುಚಿ ॥ 
ಅವರಿಂದಲೇ । ಮೋಕ್ಷಸಾಧನವು ॥ಅ.ಪ॥ 


ಅವರೆಲ್ಲಾ ಬಿತ್ತೀ ಬೆಳೆದು | ವಿವರವಾಗಿ ಅಳೆದೂ | 
ತವಕದಿ ಮೂಟೆ ಕಟ್ಟಿಟ್ಟರೆ ಜನ । 
ನವರೆಳೆಯುವ ಕಾಲಕ್ಕೆ ಬಂದೊದಗುವ ॥ ಅವರೇ !ಚರಣ॥ 


ಭಕ್ತರಾಗಿ ಇರುವೋ ಜನರಿಗೆ | 
ಮುಕ್ತಿಯನ್ನೆ ಕೊಡುವೋ ॥ 


ವಾಗೀಶ್ಡರಿ ಶಾಸಿ 19 
ಮೆ 


ಭಕ್ತರಿಗೆಲ್ಲಾ ಬಾಯಿ ಸವಿಯಾಗುವ |। 
ಶಕ್ತಿ ಪುಟ್ಟಿಸುವ ಸರ್ಡೋತ್ತಮನೆಂಬ ॥ಚರಣ॥ (ಪುಟ ೨೮೩) 


ವಾಗೀಶ್ವರಿ ಶಾಸ್ತ್ರಿ ಅವರು ನೀಡಿರುವ ವ್ರತಕಥೆಯ ಹಾಡುಗಳ 
ಒಳನೋಟ ಹೀಗಿದೆ : 


“ಈ ವ್ರತ ಕಥೆಗಳು ಹೆಸರಿಗೆ ತಕ್ಕಂತೆ ನೋಹಿ ವ್ರತ ಪೂಜೆಗಳನ್ನು 
ಯಾರು ಮಾಡಿದರು? ಮಾಡಿದರೆ ಫಲವೇನು? ಪಾಪ ಯಾವುದು? ಪಾಪಕ್ಕೆ 
ಪ್ರಾಯಶ್ಚಿತ್ರವೇನು?ಣ ಈ ರೀತಿ ಹಲವಾರು ಬಗೆಯಲ್ಲಿ ಸಾಮಾಜಿಕ ನೀತಿ 
ನಿಯಮ, ಧರ್ಮ ಕರ್ಮಗಳ ವಿಷಯಗಳನ್ನು ತಿಳಿಸುವ ಹಾಡುಗಳಾಗಿವೆ. 
ಸಾಮಾನ್ಯವಾಗಿ ಈ ವ್ರತಕ್ರಮದಲ್ಲೆಲ್ಲಾ ದಾನಧರ್ಮಗಳ ವಿಷಯವನ್ನೇ 
ಬಹುವಾಗಿ ಪ್ರಸ್ತಾಪಿಸಿದ್ದಾರೆ. ಸಂಸಾರದ ವ್ಯವಹಾರಗಳು ಬಾಯಲ್ಲಿ ಹೇಳುವಷ್ಟು 
ಸುಲಭವಲ್ಲ. ಗೃಹಧರ್ಮವನ್ನು ಪಾಲಿಸಲು ದೇಹಶಕ್ತಿ ಜೊತೆಗೆ 
ಮನೋದಾರ್ಡ್ಯವೂ (ಆತ್ಮಶಕ್ತಿಯೂ) ಇರಬೇಕಾದ್ದು ಅತ್ಯವಶ್ಯಕ.” 


ಈ ವಿಭಾಗದಲ್ಲಿ ಸ್ವರ್ಣಗೌರಿ ಕಥೆ, ಭೀಮೇಶ್ವರನ ಕಥೆ, ಮ೦ಗಳಗೌರಿ 
ಢವಳಾ, ಮೌನಗೌರಿ ವ್ರತಕಥೆ, ಅನಂತನ ವತಕಥೆ ಮೊದಲಾದ ತುಸು 
ದೀರ್ಫ ಹಾಡುಗಳಿವೆ. ಈ ಕಥೆಗಳಲ್ಲಿ ಗಂಡನ ದೀರ್ಫಾಯಸಿಗಾಗಿ ಮಾಡುವ 
ನೋಂಪಿ, ಗಂಡನ ಜೀವದಾನಕ್ಕಾಗಿ ಮಾಡುವ ಪೂಜೆ, ಸ್ತ್ರೀಯ ಬಗೆಗಿನ 
ಕ್ರೌರ್ಯ, ಅವಳ ಅಸಹಾಯಕತೆ ಸಂಪ್ರದಾಯದ ಸಂಕೀರ್ಣತೆಗೆ ಸಾಕ್ಷಿಯಾಗಿವೆ. 
ಹಣದ ಆಸೆಗಾಗಿ ಬಡಬ್ರಾಹ್ಮಣ ಮಗಳನ್ನು ಮಾರಿ, ಶವದೊಡನೆ ಮದುವೆ 
ಮಾಡಿ, ಕಾಡಿನಲ್ಲಿ ಬಿಡುವ ಹೃದಯವಿದ್ರಾವಕ ಕಥಾನಕಗಳೂ ಉಂಟು. 
ಸುಪ್ರಸಿದ್ಧವಾದ "ಕಾಳಿಂಗರಾಯ' ಕಥನಗೀತೆಯ ಹಿನ್ನೆಲೆಯುಳ್ಳ ಭೀಮೇಶ್ವರ 
ವ್ರತಕಥೆಯ ಸಾಂಗತ್ಯದ ಒಂದೆರಡು ನುಡಿಗಳು ಹೀಗಿವೆ: 


20 ವಾಗೀಶ್ಚರಿ- ಶಾಸ್ತಿ 


ಮೆ 


ಸತ್ತಶವಕೆ ಹೆಣ್ಣು ಕೊಡುವೋಲ್ಕಾರಿಲ್ಲಷೆಂದು 
`ಸೋದಠ ಕೊಟ್ಟನು. ಕನ್ನಿಕೆಯಾ. 


"ಈಗೆ ಬಾಲಕಿಯನ್ನು ಧಾರೆಯ ಎರೆದರು 
ಬೇಗ ರಥದ ಮೇಲೆ ಕುಳ್ಳಿರಿಸಿ 
”'ಗಂನೆಯ ತಡಿಗಾಗಿ ಬರುತಿರೆ ಬಿರುಗಾಳಿ 
«ಬಂದಿತು ಸಿಡಿಲು ಮಿಂಚಿನ' ರಭಸಾ. 


-ಕಾರೆಂಬೊ". ಕತ್ತಲು. ಭೋರೆಂಬೊ ಮಳೆಹುಯ್ದು ` 
-: ಅರಣ್ಯಡೊಳಗಷರನಿರಿಸಿದರೂ 
J ನಿನ್ನರಸನ್ನ ಕಾಯ್ದುಕೊಂಡಿರು ಎಂದು : 
“ಭೋರನೆ ಅಲ್ಲಿಂದ. ತೆರಳಿದರೂ. (ಪುಟ ೩೧೮) 


ಆ.-ಅಮಾಯಕ, ಹಣ್ಣಿನ ಅಗ್ನಿದಿವ್ಯ ಕಥೆ ನಮ್ಮ ಸಂಪ್ರದಾಯದ ಭಯಂಕರ 
ಮುಖ ವೊಂದನ್ನು: ಭು ನ್ಯಾವರಣ ಗೊಳಿಸುತ್ತದೆ. ಕ - 


ಹಾ ROSE ಸ್ತೋತ್ರದ ಹಾಡುಗಳ ಪರಿಣಾಮ ಅನುಪಮ. 
ಇವು: ಪುರುಷರಿಗಷ್ಟೇ: ಅಲ್ಲ. ಮಹಿಳೆಯರಿಗೂ. ಅನಿವಾರ್ಯ, ಈ ಬಗೆಗೆ 
ವಾಗೀೀಶ್ರರಿ' ಶಾಸ್ತಿ' ಅವರ "ಅಭಿಪಾಯ ಹೀಗಿದೆ: 


“ಸರಳವಾಗಿ ಸುಲಭವಾಗಿ ರಚಿಸಿರುವ ಈ. ನಿತ್ಯಪಾರಾಯಣದ 
ಹಕಡುಗಳು ಮಹಿಳೆಯ ಮಾನಸಿಕ ಆರೋಗ್ಯಕ್ಕೆ ಮದ್ದಾಗಿವೆ. ಹೆಂಗಸು 
ಎಂದರೆ ಮತೆ, ಮನೆ: ಎಂದರೆ ; ಸಂಸಾರ. ಸ೦ಸಾ ರ ಎಂದರೆ ತಾಪತ್ರಯಗಳ 


ವಾಗೀಶ್ವರಿ: ಶಾಸ್ತಿ 21 
ಈ 


ಆಗರ. ಈ ಸ೦ಸಾರರೋಗಕ್ಕೆ ಭಗವದ್ಗಕ್ಕಿ ಮತ್ತು ನ ನಾಮಸ್ನರಣೆಯೇ ಮದ್ದು 
ಎಂದಿದ್ದಾರೆ... ಸಂಸಾರವೇ ತನ್ನ. ಸರ್ವಸ್ವ ಎರದು ಸಂಬಿ, ತನ್ನ: ಜೇಪನವನ್ನೇ 
ಅದಕ್ಕೆ ಅರ್ಪಿಸಿಕೊಂಡ ಮಹಿಳೆಗೂ ನೆಮ್ಮದಿಯ ಬಾಳಿ; ಸಾಧ್ಯ ಎ೦ಬುದನ್ನು 
ಈ ದಿಸೆಯ ಕನ್ನಡ ಹಾಡುಗಳು ಎತ್ತಿ ತೋರಿಸಿಜಿ ಎ6ಬುದು ಅನುಭವದ 
ಮಾತೂ ಆಗಿದೆ... ಹಿಂದಿನ ಮಹಿಳೆ ಚಿಕ್ಕಂದಿನಿಂದಲೇ ಇಂತಹ ಸ್ತೋತ್ರದ 
ಹಾಡುಗಳನ್ನು ಬಾಯಿಪಾಠವಾಗಿ ` ಕಲಿಯುತ್ತಿದ್ದುದರಿ೦ದ,' ತನ್ನ ನಿತ್ಯ 
ಕೆಲಸದಲ್ಲಿ ತೊಡಗಿದ್ದರೂ ನಿರರ್ಗಳವಾಗಿ 'ಚಾಯುಲ್ಲಿ ಸ್ತೋತ್ರಗಳು 
ಸಾಗಿಹೋಗುತ್ತಿದ್ದವು.” | 

ನಿತ್ಯಪ ಪಾರಾಯಣದ ಸ್ತೋತ್ರದ ಹಾಡುಗಳು ಮುಂಜಾನೆಯಿಂದಲೇ 
ಪಾರಂಭವಾಗುತದೆ.' ಯಾವುದಕ್ಕೂ ಗಣಪತಿಗೆ ಆದ್ಯತೆ. ( ಉದಾಹರಣೆಗೆ : 


ಬೆನಕ. ಬೆನಕ ಏಕದಂತ. 

ಪಚ್ಚೆಕಲ್ಲು ಪ ಪಾಣಿವಟ್ಟು 

ಮುತಿನುಂಡ 'ಸ್ಪರ್ಣಿಗಂಟಿ 

ಇಂತು ವಿಘ್ನೇಶ್ವರನಿಗೆ ' | 
ಇಪ್ಪತ್ತೊಂದು ನಮಸ್ಕಾರಗಳು. ಪಟ ಬು 


ಹಾಡೊಂದು. ಸ | 


ಅಚ್ಯುತಗೆ ' ಶರಣೆಂಜೆ' ಇಕ್ಕುವೇ' ಎಡದ ಮಗ್ಗಲು ' 
-ಮನಹೋಗಿ ಮಾಬವನ ಕಾಣ್ಣಿ | 
ಚಿತ್ರ ಹೋಗಿ ಅಚ್ಯುತನ: ಕುಣ್ತಿ | 


22 ವಾಗೀಶರಿ ಶಾಸಿ 
ವ ಮೆ 


ಕಣ್ಣು ಹೋಗಿ ಸಾಲಿಗ್ರಾಮ ಲಿಂಗಾನ್‌ ಕಂಡ್ಸರಲಿ । 

ಕಾಲೋಗಿ ಭಾಗೀರಥಿ ಸ್ನಾನ ಮಾಡ್ದರಲಿ | 

ಅಂಗರಂಗನ್‌ ಕಾವು (ಕಾವಲು) । 

ಬಾಗಿಲ್ಲೆ ಸುಗ್ರೀವನ ಕಾವು । 

ನಡುಮನೆ ಬಿಡಾರಕ್ಕೆ ರಾಮಲಕ್ಷ್ಮಣರ ಕಾವು । 

ಇಷ್ಟು ಮೀರಿ ಬಂದ ಕಳ್ಳನ್‌ ತಲೆ ಸಹಸ್ರಹೋಳಾಗ್ಲಿ | 

ಈಶ್ವರಾ ಇಂದಿನ ಕರ್ಮವೆಲ್ಲಾ ನಿನಗರ್ಪಿತ | 

ಶ್ರೀ ಕೃಷ್ಣಾರ್ಪಣಮಸ್ತು (ಪುಟ ೪೯೭) 

“ಹೃದಯ ಸಂಪುಟ' ಗ್ರಂಥದ ವಿಶೇಷ ವಿಭಾಗ ಕಥನಗೀತೆಗಳದು. 

ಇದನ್ನು ಸಂಪ್ರದಾಯ ಹಾಡುಗಳಲ್ಲಿ ಪ್ರಬಂಧ ಸಾಹಿತ್ಯ ಎಂದು ಕರೆದಿದೆ. 
ವಾಗೀಶ್ವರಿ ಅವರು ವಿಭಾಗದ ಪ್ರಸ್ತಾವನೆಯಲ್ಲಿ ಹೀಗೆ ಬರೆದಿದ್ದಾರೆ : 


“ಈ ಗುಂಪಿನಲ್ಲಿ ಹಾಡುಗಳು ತುಂಡುತುಂಡಾದ ಹಾಡುಗಳೂ 
ಅಲ್ಲ ಅಥವಾ ಒಂದೇ ಧ್ವನಿಯಲ್ಲಿ ಹೇಳುವ ಹಾಡುಗಳೂ ಅಲ್ಲ. ಇವು 
ಹೆಸರಿಗೆ ತಕ್ಕಂತೆ ಬಹುವಿಸ್ತಾರವಾಗಿದ್ದು, ಯಾರು? ಯಾರಿಗೆ? ಯಾವಾಗ? 
ಏಕೆ? ಹೇಳಿದರು ಮುಂತಾದವುಗಳನ್ನೆಲ್ಲಾ ತಿಳಿಸಿ, ಮಧ್ಯೆ ಮಧ್ಯೆ 
ಪೂರ್ವಕಥೆಗಳು, ಉಪಾಖ್ಯಾನಗಳು ಸೇರಿರುವ ಅತಿದೊಡ್ಡ ಹಾಡುಗಳು. 
ಇದರಲ್ಲಿ ಪ್ರತಿನೆಲೆಗೂ ಧ್ವನಿ ಬದಲಾಗುತ್ತದೆ. ಅಲ್ಲದೆ ಮಧ್ಯೆ ಮಧ್ಯೆ ವಚನಗಳೂ 
ಕಂದಗಳೂ ಆಂರ್ಕುಗಳೂ ವೃತ್ತಗಳೂ ಇದ್ದು ವೈವಿಧ್ಯ ಮತ್ತು 
ರಸಮಯವಾಗಿರುವ ದೊಡ್ಡ ಭಾಗ... ಪ್ರತಿಯೊಂದು ಕವಿತೆಯಲ್ಲಿಯೂ 
ರಾಗ ರಸಭಾವಗಳನ್ನು ಕಾಣುತ್ತೇವೆ. ಇವುಗಳನ್ನು ಸುಲಭವಾಗಿ ಕಲಿಯಲು 


ವಾಗೀಶ್ಪರಿ ಶಾಸಿ 23 
ಈ 


ಆಗುವುದಿಲ್ಲ... ಕಲಿಯಬೇಕಾದರೆ ಶ್ರದ್ಧೆ ತಾಳ್ಮೆ ಜ್ಞಾಪಕಶಕ್ತಿ ತು೦ಬಬೇಕಾಗುತ್ತದೆ... 
ಈ ದಿಸೆಯಲ್ಲಿ ಹಿಂದಿನ ಮಹಿಳೆ ಇಂತಹ ಹಾಡುಗಳನ್ನು ಕಂಠಪಾಠವಾಗಿ 
ಕಲಿತು, ಸ್ವತಃ ವ್ಯಖ್ಯಾನ ಮಾಡುವಷ್ಟು ವಾಗ್ಮಿಯೂ ಪ್ರಾಜ್ಞಳೂ ಆಗಿದ್ದಳ೦ಬುದಕ್ಕೆ 
ಈ ಹಾಡುಗಳು ಇಷ್ಟುಕಾಲವಾದರೂ ಉಳಿದುಕೊಂಡಿರುವುದೇ ಸಾಕ್ಷಿ.” 


ಸುಪ್ರಸಿದ್ಧ ಬಬ್ರುವಾಹನ ಕಾಳಗ ಯಕ್ಷಗಾನ ಕಥನಗೀತೆಯಲ್ಲಿ 
ಬಬ್ರುವಾಹನ ಪಾರ್ಥರ ವೀರಾವೇಶದ ಒಂದು ಸಂಭಾಷಣಾ ಸಂದರ್ಭ 
ಹೀಗಿದೆ : 


ಬಬ್ರುವಾಹನ- 
ಪುಲ್ಲ ಫಲುಗುಣ ಕದನ । ಬೇಡಾವೆನ್ನಲಿ ॥ ಹರ 
ನಲ್ಲಿ ಪಡೆದಾ ಬಾಣವಾ । ತೋರೋ ನಿನ್ನಲೀ ॥ 
ಪಾರ್ಥ- 
ಹರನ ಪಾಶುಪತಾಸ್ತಕೆ ಗುರಿಯೆ ನೀನು । 
ಬೇಡ ಓಡಿಹೋಗೆನ್ನುತಾ ಎಸೆದ ವಾರಣಾಸ್ತವಾ ॥ 
ಬಬ್ರುವಾಹನ- 
ಯಾತಕೆ ಹುಲ್ಲುಕಣೆಗಳ್‌ ಎನುತಾ ಖಂಡ್ರಿಸಿ ಬಹಳ 
ಫಾತಿಸಿದಾ ಪಾರ್ಥನಾ ಸಾರಥಿಯಾ ಖಂಡಿಸಿ ॥ 
ಪದ್ಯ - 
ಹಲವು ವೀರರ ಗೆಲಿದ ಕಣಗಳು । 
ಕಳಚಿದುವು ಕಾಳಗದಿ ಕೌರವಾ | 
ಕುಲವ ತೀರ್ಚಿದೆನೆಂಬ ಅಸ್ತಗಳು ಹುಸಿಯಾಯ್ತು ॥ 
ಎಲವೋ ಇನ್ನೆಲ್ಲಿಹುದೋ ಚಾಪದಾ । 


ಳಃ 


(2 


(ಟಃ 24 ಹಗೀತ್ಸರ' 


ನಖಯ 'ಭಯಾಠಿತಕ: ಸಾಣೆ. ಶಿವಶಿಪ: T 
ಫಲುಗುಣನ ಸಾರಥಿ: ಮುರಿದು" ಟಟ 'ರಣಾಗದಲೀ-॥ 
NE GS ಇಂ್ಯ - (ಪುಟ ಖ೬ಟ) 
5” ಬಬ್ರುವಾಹನ eh ಕಥಾನಕವಾಗಿಡೆ; 

ಗಾಯನಕ್ಕೂ: ಅಭಿನಂಯಕ್ಕೂ ಅಮ್ಬುತವಾಗಿದೆ.. pe 

ವ ಜೆಡರಕಥೆ' ಯಕ್ಷಗಾನ ಕಥನಗೇತಯಲ್ಲಿ ಸೋಮಶೇಖರ 
ಚಿತ್ರಶೇಖರರು ವೀರಕಂಕಣ ಕಟ್ಟಿ ತಾಯಿಯಿಂದ ಬೀಳ್ಕೊಳ್ಳುವ 'ಸರದರ್ಭ 
ಅಟ್ಟತಾಳ ಅರ್ಧರೇಕು ರಚನೆಯಲ್ಲಿದೆ : ಟ್‌ 


ಉಟ್ಟ ಚಲ್ಲಣ: ದಟ್ಟಿ:ಕಟ್ಟೀ -ಪಂಕುಡಿಯಾ: | 
(| ಪ ಜು: - ಜೆ 1 ದ ಎಡ್‌ ಸ K ಕ 


ಅಂಜನ ಅದೃಶ್ಯದ ತಿಲಕವನಿಟ್ಟು ಚವು. le 
ಕುಳಿ ಕಂಠಮಾಲೆ ಪದಕಾವ, ಧರಿಸೀ 


ಬಿರಿದೀನ ಕಾಲ ಪೆಂಡೆಯವನಳವಡಿಸೀ, | ಲ 
ಚಂದ್ರಾಯಧವು 1 ಕನ್ನಕತ್ತರಯ' 2... 44 


RE PME | 
ವಾಕಟ್ಟು ಸಭಕಟ್ಟು ಸ್ತೀಪಶ್ಯವನ್ನು ೪" A ಚತ 


ee ೬ “Be ee ವಾ ತ pS 
ರಾ pe ಗು ಇಬ ಬಹುತ - pa A ಗೂ 


ರಾಜವಶ್ಯಾ ಜನಾಪಕ್ಯದಿಿಡಲಿ: ಸರ್ಪ. es ಸರಿ ಇತ ಜರಿ 


ಸನ್ನಾ ಹದಿಂ ಸಾಹಸವ೦ತರಾಗೀ- ಕೋ: ನಂದ ದಲ ಅಭಯ 


(ಪುಟ ೬೯೮) 


ವಾಗೀಶರಿ ಶಾಸಿ 25 
ವ ಮೆ 


“ಹೃದಯ ಸಂಪುಟ'ದ ಕಥನಗೀತೆಗಳು ವಿಶೇಷ ಅಧ್ಯಯನಕ್ಕೆ 
ಅವಕಾಶ ನೀಡುತ್ತವೆ. ಈ ಕಥನಕಾವ್ಯಗಳು ಸಂಪ್ರದಾಯಸ್ಥ ಬ್ರಾಹ್ಮಣ ಸ್ತ್ರೀಯರಿಗೆ 
ಪ್ರಿಯವಾದದ್ದು, ಅವರ ಕಂಠಸ್ಥವಾದದ್ದು, ಏಕಾದಶಿ, ಶಿವರಾತ್ರಿ, 
ಯಷಿಪ೦ಚಮಿಗಳಲ್ಲಿ ಹಾಡುಗಾರಿಕೆಗೆ ರೂಡಿಗೆ ಬಂದಿದ್ದಾ 
ಎಸ್ಮಯಕಾರಿಯಾಗಿದೆ. 'ಕಸ್ತೂರಿಸಿದ್ದ'ನೆಂಬ ಕಾಕೋದ್ಗಿರಿಯ ಬ್ರಾಹಣೇತರ 
ಕವಿ (ಬಹುಶಃ ಲಿಂಗಾಯಿತ) ಬರೆದ ಚೋರಕಥೆ ಎಂಬ ಯಕ್ಷಗಾನ ಕಾವ್ಯ 
ಬ್ರಾಹ್ಮಣ ಸ್ತ್ರೀಯರ ಸಂಪ್ರದಾಯದ ಹಾಡುಗಳ ಜೊತೆಗೆ ಸೇರಿರುವುದು 
ಆಶ್ಚರ್ಯ ಹುಟ್ಟಿಸುತ್ತದೆ. ಚೋರಕಥೆ ವೈವಿಧ್ಯ ವಸ್ತು ವಿಷಯ ಘಟನೆಗಳಿಂದ 
ಕೂಡಿದ ಸ್ವಾರಸ್ಕಮಯ ಕಥೆಯಾಗಿದೆ. 


ಚಜೋರಕಥೆ ಮೂಲತಃ ಒಂದು ಜನಪದ ಕಥೆ. ಚೋರಕಥೆ, 
ಸೋಮಶೇಖರ ಚಿತ್ರಶೇಖರ, ಸುವರ್ಣಾದೇವಿ ಎ೦ಬ ಬೇರೆ ಬೇರೆ 
ಹೆಸರುಗಳಿಂದ ಈ ಕಥೆ ರಾಜ್ಯದ ಹಲವು ಕಡೆ ಪ್ರಚಾರದಲ್ಲಿದೆ. ಈ ಕಥೆಯ 
ಆಧಾರದಿಂದ ಯಕ್ಷಗಾನ ಕಾವ್ಯ, ನಾಟಕ ಹುಟ್ಟಿದೆ. ಇದರ ಯಾವ ಅಂಶ 
ಬ್ರಾಹ್ಮಣ ಸ್ತ್ರೀಯರಿಗೆ ಇಷ್ಟವಾಯಿತೋ ಹೇಳಲಾಗುವುದಿಲ್ಲ. ಈ ಕಥೆಗೆ 
ಚಿತ್ರದುರ್ಗ. ಪರಿಸರದ ಚಾರಿತ್ರಿಕ ವ್ಯಕ್ತಿ ಘಟನೆ ಕಥೆಯ ಸಂಪರ್ಕವೂ 
ಇರುವಂತಿದೆ. ಈ ಬಗೆಗೆ ಅಧ್ಯಯನ ಚು 


ಸಂಪ್ರದಾಯದ ಹಾಡುಗಳಲ್ಲಿ ಮಕ್ಕಳ ಸಾಹಿತ್ಯವೂ ಉಂಟು. ಅದು 
ನಿರ್ದಿಷ್ಟ ಸಮಯ, ಆಚರಣೆಗೆ ಸಂಬಂಧಿಸಿದ್ದು; ವಿಶೇಷವಗಿ ಮಕ್ಕಳು ಮತ್ತು 
ಸ್ತೀಯರ ಪ್ರವೇಶದ್ದು; ಶ್ರಾವಣಮಾಸ ಹಾಗೂ ಭಾದ್ರಪದ ಮಾಸದ 
ಚಟುವಟಿಕೆಗಳು. "ನವರಾತ್ರಿ' ದೊಡ್ಡವರಿಗೆ ವಿಶೇಷ, “ಬೊಂಬೆಹಬ್ಬ' ಮಕ್ಕಳಿಗೆ 
ವಿಶೇಷ. ಆ ಕುರಿತು ವಾಗೀಶ್ವರಿ ಶಾಸ್ತ್ರಿ ಹೀಗೆ ಪ್ರಸ್ತಾಪಿಸಿದ್ದಾರೆ. 


ಎ 


€ ಗಾಂ 
26 ವಾಗೀಶ್ಡರಿ ಶಾಸ್ತ್ರಿ 


ಹ 


“ಬೊಂಬೆಗಳಿಗೆ ಅಲಂಕಾರಗಳನ್ನು ಮಾಡಿ ಪ್ರದರ್ಶನಕ್ಕೆ ಪೂಜೆ 

ಅಣಿಮಾಡುವುದೂ ಸಣ ಸಣ್ಣ ಬೋಗುಣಿಗಳಲಿ ರಾತಿ ಬತಗಳನು, ಒಗ್ಗುಹಾಕಿ 
ಣ ಣು ಛು ಎ, 1. 

ಬೆಳೆಸಿ ಅಲಂಕಾರಕ್ಕೆ ಇಡುವುದೂ ದೊಡ್ಡ ದೊಡ್ಡ ಹಜಾರಗಳಲ್ಲಿ ಅ೦ತಸ್ತುಗಳನ್ನು 


dD 


ಜ್‌ 


ನಿರ್ಮಿಸಿ, ಕಲಾತ್ಮಕತೆಯಿಂದ ಬೊಂಬೆಗಳನ್ನು ಜೋಡಿಸಿ ಕೂರಿಸುವುದೂ 
ಒ೦ದು ಸಂಪ್ರದಾಯ. ಕೆರೆ ಬಾವಿ ಪೈರುಷಚ್ಛೆ ಪೇಟೆ ಕೋಟಿ ಗುಡಿಗೋಪುರ, 
ಕಾಡುಮೇಡು. ರಾಜರಾಣೀ, ಅಂಗಡೀ ಸಾಲು, ಅರಮನೆ ಸೈನ್ಯ ಹೀಗೆ 
ಅದನ್ನೇ ಒಂದು ಸಣ್ಣ ಪ್ರಪ೦ಚದಂತೆ ನಿರ್ಮಿಸಿ, ಮಕ್ಕಳಿಗೆ ದೇಶ ದೊರೆ 
ವ್ಯಾಪಾರ ವ್ಯವಸಾಯ ವ್ಯವಹಾರ ಇತ್ಯಾದಿ ಸಾಮಾಜಿಕ ಪಜ್ಞೆ ಮೂಡಲು 
ಅವಕಾಶ ಈ ಬೊಂಬೆ ಹಬ್ಬದಲ್ಲಿದೆ... ಪೂಜೆಗೆ ಹಾಡು ಹಸೆಗಳು ಹೆಣ್ಣುಮಕ್ಕಳ 
ಪಾಲಿಗೆ ಸೇರಿದ್ದು.” 


ಗ್ರಾಮೀಣ ಜನಪದದಲ್ಲಾಗಲೀ ಬ್ರಾಹ್ಮಣ ಜನಪದದಲ್ಲಾಗಲೀ ಮಕ್ಕಳ 
ಹಿತ್ಯ ಹೇರಳವಾಗಿದೆ; ವೈವಿಧ್ಯವಾಗಿದೆ; ಮಕ್ಕಳ ಜ್ವನಾರ್ಜನೆಗೆ 
ಸಹಾಯಕವಾಗಿದೆ. ಎರಡುಗುಂಪಿನಲ್ಲಿ ಮಕ್ಕಳು ಹಾಡಿಕೊಳ್ಳುವ ಪ್ರಶ್ನೋತ್ತರ 
ರೂಪದ ಹಾಡೊಂದು ಹೀಗಿದೆ: ಒಂದೊಂದು ಸಾಲನ್ನು. ಒಂದೊಂದು 
ಗುಂಪಿನವರು ಹೇಳಿದರೆ ಅರ್ಥಪೂರ್ಣವಾಗಿರುತ್ತದೆ: 


J 


1 


ಒಂದೆ೦ಬೋದು ಚಂದಮಾಲೇ ಸರ 
ಎರಡೆ೦ಂಬುದೇನೇ ಹೆಸರ್ಬೇಳ? 


ಎರಡೆ೦ಬೋದು ಗರುಡಮಾಲೇ ಸರ 
ಮೂರೆಂಬುದೇನೇ ಹೆಸ್ದೇಳ 


ಮೂರೆಂಬೋದು ಮುತ್ತಿನಸರ ಕಣೇ 
ನಾಲ್ಕೆಂಬುದೇನೇ ಹೆಸದ್ದೇಳೆ? 


ವಾಗೀಶ್ವರಿ ಶಾಸಿ 27 
ಣು 


ನಾಲ್ಕೆಂಬೋದು ಆಕಳ ಮೊಲೆ ಕಣೆ 
ಐದೆಂಬುದೇನೇ ಹೆಸದ್ದೇಳೆ? 


ಐದೆಂಬೋದು ಕೊಯ್ದಮಲ್ಲೆ ಸರ 
ಆರೆಂಬುದೇನೇ ಹೆಸದ್ದೇಳ? 


ಆರೆ೦ಬೋದು ಹಾರುವಹಕ್ಕಿ ಕಣೆ 
ಏಳೆಂಬುದೇನೇ ಹೆ 


ವಿ ೨ ಮ 
ಎಂಟಂಬೋದು ಕಂಠಮಾಲೇ ಸರ 
ಎ ಇದಿ ಮೆ ಎ2 

ಒ೦ಬತ್ತ೦ಬುದೇ ನೀ ಹೆಸರ್ಬೇಳ? 


ಹತ್ತೆಂಬೋದು ಕಿತ್ತಳ ಬನ ಕಣೆ 
ಹನ್ನೊಂದೆಂಬುದೇನೇ ಹೆಸದ್ದೇಳ? 


ಹನ್ನೊಂಡೆಂಬೋದು ಹೊನ್ನಿನ ಉಂಗ್ರ ಕಣೆ 

ಇನ್ನೊಂದ್ದೇಳೆ ಗಂಡನ್ಷೆಸರಾ? 

ಮತ್ತೊಂದ್ದೇಳೆ ಮಾವನ್ಹಸರಾ? 

ಮಗುದೊಂದ್ಹೇಳೆ ಅತ್ತೆ ಹೆಸರಾ? (ಪುಟ ೮೩೭) 


28 ವಾಗೀಶ್ಪರಿ ಶಾಸಿ 
ಮೆ 


ಎಲ್ಲರೂ "ಬಸವ ಬಸವ' ಎಂದು ಹೇಳಿ ಒಳಗೆ ಹೋಗುವರು. 
ಇದರಲ್ಲಿ ಆಟದ ಜೊತೆಗೆ ಪಾಠವೂ ಇರುವುದನ್ನು ಗಮನಿಸಬಹುದು. ಹೊಸ 
ಹೊಸ ಶಬ್ದ ಹಾಗೂ ವಿಷಯದ ವಿಚಾರವೂ ಇದೆ. ಮಕ್ಕಳ ಗೀತೆಗಳ 
ಉದ್ದೇಶ ಬಹುಮುಖಿಯಾದದ್ದು. 


ವಾಗೀಶರಿ ಶಾಸ್ತ್ರಿ ಅವರು ಬಾಲ್ಯದಿ೦ದಲೂ ಸಂಪ್ರದಾಯದ 
ಹಾಡುಗಳಿಗೆ ಮಾರುಹೋದವರು. ಮುತ್ತಜ್ಜಿ, ಅಜ್ಜಿ, ಅತ್ತೆ, ಅಕ್ಕ, ನೆರೆಹೊರೆ 
ಮುತ್ತೈದೆಯರಿಂದ ಹಾಡುಗಳನ್ನು ಕೇಳಿ, ಕಲಿತು ಬೆಳೆದವರು. ಅಗಾಧ 
ನೆನಪಿನ ಶಕ್ತಿಯನ್ನು ಪಡೆದಿರುವ ವಾಗೀಶ್ವರಿ ಅವರು ಕೇಳಿ ಕಲಿತಿದ್ದನ್ನು 
ನೆನಪಿನೋವರಿಯಲ್ಲಿ ರಕ್ಷಿಸಿ, ಕೇಳಿದವರ ಮುಂದೆ ಹಾಡಿ ಸಂತೋಷಿಸಿ, 
ಅಪರೂಪದ ಹಾಡುಗಳನ್ನು ಉಳಿಸಿಕೊ೦ಡು ಬ೦ದವರು. ಅವುಗಳನ್ನು 
ಅಕ್ಷರರೂಪಕ್ಕಿಳಿಸಿ, ಗ್ರಂಥರೂಪದಲ್ಲಿ ಪ್ರಕಟಿಸಿ, ಕನ್ನಡ ಸಾರಸ್ವತ ಲೋಕಕ್ಕೆ 
ಅರ್ಪಿಸಿದವರು. 

ವಾಗೀಶ್ವರಿ ಶಾಸ್ತ್ರಿ ತಾವು ಸಂಪ್ರದಾಯದ ಹಾಡುಗಳನ್ನು 
ಕಲಿಯುವುದರ ಜೊತೆಗೆ ತಮ್ಮ ಮಕ್ಕಳು ಮೊಮ್ಮಕ್ಕಳಿಗೂ ಇತರ ಆಸಕ್ತರಿಗೂ 
ಕಲಿಸಿದರು. ಪರೋಕ್ಷವಾಗಿ ಮೌಖಕ ಗೀತಸಾಹಿತ್ಯ ಜೀವಂತವಾಗಿ 
ಮುಂದುವರಿಯಲು ಕಾರಣರಾದರು. ಇದು ಮೌಖಕ ಸಾಹಿತ್ಯವನ್ನು 
ಉಳಿಸಿಕೊಳ್ಳುವ ಉತ್ತಮ ಮಾರ್ಗ. ಇಂಪಾಗಿ ಹಾಡಿ, ಹಾಡಿಸಿ, ಅವು 
ಇತರ ಕೇಳುಗರಿಗೂ ಸಂತೋಷ ನೀಡಲಿ ಎಂಬ ಸದುದ್ದೇಶದಿಂದ ಹಲವು 
ಧ್ವನಿಸುರುಳಿಗಳನ್ನೂ ವಿಡಿಯೋ ಸಿಡಿಗಳನ್ನೂ ಸಿದ್ಧಪಡಿಸಿ ಬಿಡುಗಡೆ 
ಮಾಡಿದ್ದಾರೆ. ಇವು ಹೊರ ದೇಶಗಳಲ್ಲೂ ಪ್ರಚಾರದಲ್ಲಿವೆ. ಉದಾಹರಣೆಗೆ: 
ಜೋಜೋ ಕಂದ, ಅಕ್ಷರ ಕಲಿ ನೀ ಕಂದ, ಸುಲಗ್ನಾ ಸಾವಧಾನ, ಮದುವೆಯ 
ಮೋಜಿನ ಹಾಡುಗಳು, ಗೌರಿ ಹಬ್ಬದ ಹಾಡುಗಳು, . ಎದ್ದು ಬಾ ಮುದ್ದು 
ಗಣಪ, ಆರತಿಯ ಮಗಳು, ವರವಕೊಡು ವರಲಕ್ಷ್ಮಿ ಅನಂತನ ಹಬ್ಬದ 
ಹಾಡುಗಳು ಮೊದಲಾದವು. 


ವಾಗೀಶರಿ ಶಾಸಿ 29 
ಚ ಮಿ 


ಬ್ರಾಹ್ಮಣೀ ಸಂಪ್ರದಾಯದ ಹಾಡುಗಳಲ್ಲಿ ಪುರಾಣ ಪರಿವೇಷ 
ಚಿತ್ರಗಳು ದಟ್ಟವಾಗಿವೆ; ಪೌರಾಣಿಕ ಪಾತ್ರ ಮತ್ತು ಸನ್ನಿವೇಶಗಳು ಸಮಕಾಲೀನ 
ಸಾಮಾಜಿಕ ಬದುಕಿಗೆ ಸ್ಫೂರ್ತಿಯಾಗಿವೆ; ಅದಮ್ಯ ಜೀವನಪ್ರೀತಿ, ಆದರ್ಶ 
ವ್ಯಕ್ತಿವಿಕಾಸದ ಸೆಲೆಗಳು ಅನನ್ಯವಾಗಿ ಹೊರಹೊಮ್ಮಿವೆ; ಸ್ತೀಸಹಜವಾದ ರೋಚಕ 
ಧಾರ್ಮಿಕ ಆಚರಣಾತ್ಮಕ ಪರಿಕಲ್ಪನೆಗಳು ಪುಷ್ಪಗುಚ್ಛಗಳಂತೆ ಅರಳಿ ಪರಿಮಳ 
ಬೀರಿವೆ. ಅವುಗಳಲ್ಲಿ ಸಾಹಿತ್ಯಕ ಪರಿಕರಗಳಿಗಿ೦ತ ಸಾಂಸ್ಕೃತಿಕ ಪರಿಕರಗಳೇ 
ಅಧಿಕವಾಗಿವೆ. ಶಬ್ದ ಚಮತ್ಕಾರಗಳಿಗೂ ಕೊರತೆಯಿಲ್ಲ. 


ಲಬ ಟ್ಟೆ 
ಜಾನಪದ” ವಾಹಿನಿಯೂ ಸೇರಿದೆ. ಅವಣ್ಜಿಗೆ ಒಳಗಾಗಿದ್ದ ಬ್ರಾಹ್ಮಣ 
ಜಾನಪದವನ್ನು ಸಂಗ್ರಹಿಸಿ ಪ್ರಕಟಿಸಿ ಗಮನಸೆಳೆದವರಲ್ಲಿ ಶ್ರೀ ಮತಿಘಟ್ಟ 
ಷಃ | ರೀವ | ಬ್ರ y To 
ಕೃಷ್ಣಮೂರ್ತಿ ಅವರನ್ನು ಬಿಟ್ಟರೆ, ಶೀಮತಿ ವಾಗೀಶ್ವರಿ ಶಾಸ್ತಿ ವಿಶೇಷ ಉಲ್ಲೇಖಕ್ಕೆ 
| ; ವದೆ ಗೀತ ಮಕಾರ ಜ್‌ 
ಅರ್ಹರಾಗಿದ್ದಾರೆ. ಈ ಇಬ್ಬರೂ ಬ್ರಾಹ್ಮಣ ಜನಪದ ಗೀತ ಪ್ರಕಾರಕ್ಕೆ ನೀಡಿರುವ 
ಕೊಡುಗೆ ಅಪಾರ. ವಾಗೀಶ್ವರಿ ಶಾಸ್ತಿ ಅವರ ಬೃಹತ್‌ ಸಂಪುಟದಲ್ಲಿ ಬ್ರಾಹ್ಮಣ 
೦ ಮೆ ೧೨ 


ಸಂಪ್ರದಾಯದ ಬಹುತೇಕ ಎಲ್ಲ ಸಂಪ್ರದಾಯದ ಹಾಡುಗಳೂ ಸೇರಿರುವುದು 
ಅಧ್ಯಯನಕಾರರಿಗೆ ಅಕ್ಷಯನಿಧಿ ಸಿಕ್ಕಂತಾಗಿದೆ. 

ಸಂಪ್ರದಾಯದ ನೆರಳಲ್ಲೇ ಜೀವನಸಾಗಿಸುತ್ತಿದ್ದ ಬ್ರಾಹ್ಮಣ ಗೃಹಿಣಿಯರಲ್ಲಿ 
ಇಷ್ಟೊಂದು ಅಧಿಕ ಸಂಖ್ಯೆಯ ಸಂಪ್ರದಾಯದ ಹಾಡುಗಳು ಉಳಿದುಕೊಂಡು 
ಬಂದಿವೆ ಎನ್ನುವುದೇ ಆಶ್ಚರ್ಯದ ಸಂಗತಿ. ಬ್ರಾಹ್ಮಣ ಸಮಾಜದ 
"ಹಿತ್ತಲಮನೆ'ಯ ಸಾಹಿತ್ಯ, ಕನ್ನಡ ಜನಪದ ಸಾಹಿತ್ಯ ಸಂಪತ್ತನ್ನು ವೃದ್ಧಿಸಿದೆ 
ಎ೦ಬುದು ವಾಸ್ತವ ಸತ್ಯ. 


“ಹೃದಯ ಸಂಪುಟ” ಸುಪುಷ್ಟ ಗ್ರಂಥದಿಂದ 
ಲಿ 


ಅವರು ಕನ್ನಡ ಸಾಹಿತ್ಯ ಕ್ಷೇತ್ರದ 


30 ವಾಗೀಶರಿ ಶಾಸಿ 
ದ ವಿ 


ಪ್ರಶಸ್ತಿ ಬಿರುದುಗಳೂ ಲಭ್ಯವಾದವು. "ಹೃದಯ ಸಂಪುಟ' ಗ್ರಂಥಕ್ಕೆ 
“ಕಾವ್ಯಾನಂದ ಪುರಸ್ಕಾರ' (೧೯೮೫), ಕರ್ನಾಟಕ ಜಾನಪದ ಅಕಾಡೆಮಿ 
ಪ್ರಶಸ್ತಿ (೧೯೯೨), ಬೆಂಗಳೂರು `ಶಾಶ್ವತಿ' ಸಂಸ್ಥೆಯಿಂದ “ಕರ್ನಾಟಕ ಕಲ್ಪವಲ್ಲಿ' 
ಪ್ರಶಸ್ಥಿ (೧೯೯೪), ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಲೋಕೋತ್ಸವ 
ಪ್ರಶಸ್ತಿ (೨೦೧೦)ಗಳು ದೊರಕಿವೆ. ಅಮೆರಿಕ ಪ್ರವಾಸಕ್ಕೆ ಹೋಗಿದ್ದಾಗ 
ನ್ಯೂಯಾರ್ಕ್‌ ಕನ್ನಡ ಕೂಟದವರು ಸನ್ಮಾನಿಸಿ ಗೌರವಿಸಿದರು. ಸಿ೦ಗಪುರ 
ಪ್ರವಾಸದ ಅನುಭವವೂ ಲೇಖಕಿಗಿದೆ. ಆಕಾಶವಾಣಿ ಹಾಗೂ ದೂರದರ್ಶನ 


ಕಾರ್ಯಕ್ರಮಗಳಿಂದಲೂ ಜನರಿಗೆ ಪರಿಚಿತರಾಗಿದ್ದಾರೆ. 


ವಾಗೀಶ್ವರಿ ಶಾಸ್ತ್ರಿ ಸಂಪ್ರದಾಯ ಹಾಡುಗಳ ಮಹಾಕೋಶ. ದೊಡ್ಡ 
ಸಂಸಾರದ ಗೃಹಣಿ, ತನ್ನ ಸ೦ಸಾರದ ಜವಾಬ್ದಾರಿಯ ಜೊತೆಗೆ, ಇಷ್ಟೊಂದು 
ಹಾಡುಗಳನ್ನು ಕಲಿಯಲು ಸಾಧ್ಯವೇ ಕಲಿತಿದ್ದನ್ನು ಮರೆಯದೆ ಜ್ಞಾಪಕದಲ್ಲಿ 
ಇಟ್ಟುಕೊಳ್ಳುವುದು ಸಾಧ್ಯವೇ ಎ೦ದು ವಿಸ್ಮಯವಾಗುತ್ತದೆ. ಅವರದು ಕಂಚಿನ 
ಕ೦ಂಠಶ್ರೀ. ಅವರ ನೆನಪು ನಿರರ್ಗಳಧಾರೆ. ಅವರ ಮಾತುಗಾರಿಕೆ, ಹಾಡುಗಾರಿಕೆ 
ಸರಾಗ, ಸಮೃದ್ಧ. ಈ ಅಪೂರ್ವ ಸಾಧನೆಯ ಹಾಡುಗಾರ್ತಿ ಕಲಿತುದನ್ನೆಲ್ಲ 
ಬರೆದು ಪ್ರಕಟಿಸಿಲ್ಲ. ಇನ್ನೂ ಎಷ್ಟೋ ಹಾಡುಗಳು ಅವರ ಮನದೋವರಿಯಲ್ಲಿ 
ಉಳಿದುಕೊಂಡಿವೆ. ಕೇಳುಗರು ಬಯಸಿದಾಗ ಅಲೆಅಲೆಯಾಗಿ 
ಹೊರಹೊಮ್ಮುತ್ತವೆ. ಎಷ್ಟು ಹಾಡಿದರೂ ಅವರ ಉತ್ಸಾಹ ಕುಗ್ಗುವುದಿಲ್ಲ. 
ಎಷ್ಟು ಹಾಡಿದರೂ ಅವರ ಹಾಡುಗಳ ಬತ್ತಳಿಕೆ ಮುಗಿಯುವುದಿಲ್ಲ. ವಾಗೀಶ್ವರಿ 
ಹೆಸರಿಗೆ ತಕ್ಕಂತೆ “ಸಾವಿರಾರು ಪದಗಳ ಸರಸ್ಪತಿ”, “ವಾಗರ್ಥ ಸಂಪನ್ನೆ', 
ಸಂಸ್ಕೃತಿ ಸುಶೀಲೆ”, ಸಂಪ್ರದಾಯ ಗೀತಗಾಯನ ಕೋಗಿಲೆ. ಅವರು ತೆಲುಗು 
ಭಾಷೆಯ ಸಂಪ್ರದಾಯದ ಹಾಡುಗಳನ್ನೂ ಸುಶ್ರಾವ್ಯವಾಗಿ ಹಾಡುವುದುಂಟು. 


ವಾಗೀಶ್ಪರಿ ಶಾಸಿ 31 
ಮೆ 


ವಾಗೀಶ್ನರಿ ಶಾಸ್ತ್ರಿ ಅವರದು ದೈವದತ್ತವಾದ, ಆಕರ್ಷಕವಾದ ಕ೦ಠಶ್ರೀ; 
ಹಾಗಾಗಿ ಹಾಡುಗಾರಿಕೆಯಲ್ಲಿ ತನ್ಮಯತೆ. ಅನನ್ಯ ನೆನಪಿನ ಶಕ್ತಿ; ಹಾಗಾಗಿ 
ಎದೆಯ ತು೦ಬ ಹಾಡು, ಜೀವನವೆಲ್ಲಾ ಹಾಡುಗಾರಿಕೆಯಲ್ಲಿ ತೊಡಗಿದರೂ 
ಬತ್ತಿಹೋಗದ ಉತ್ಸಾಹ. ಸಂಪ್ರದಾಯ ಪರಿಸರದ ನಡುವೆಯೇ, ಸಂಸಾರದ 
ಜವಾಬ್ದಾರಿ ಸಂಗಡವೇ ಸ್ಪಶ್ರಮದಿಂದ ಸಾಹಿತ್ಯಸೃಷ್ಟಿ, ಅದರಿಂದ ಕನ್ನಡ 
ಸಾಹಿತ್ಯ ಕ್ಷೇತ್ರಕ್ಕೆ ಲಾಭ. 


ವಾಗೀಶ್ವರಿ ಶಾಸ್ತಿ ಅವರು ಅಸಾಧಾರಣ ದೈವಭಕ್ತರು; ಕುಲದೈವ 
ಹಾಗೂ ಇಷ್ಟದೈವ ನಿಷ್ಠರು. ತಲೆತಲಾಂತರದಿಂದ ರೂಢಿಗೆ ಬಂದಿರುವ 
ಧಾರ್ಮಿಕಶ್ರದ್ಧೆಯಲ್ಲಿ ಅಚಲವಾದ ನಂಬಿಕೆಯುಳ್ಳವರು. ಬದುಕಿನ 
ಆಗುಹೋಗುಗಳನ್ನು ಅಕ್ಕಿಹೆಬ್ಬಾಳಿನ ನರಸಿ೦ಹಸ್ವಾಮಿಗೆ ಅರ್ಪಿಸಿ 
ನೆಮ್ಮದಿಯಿಂದಿರಬಯಸಿದವರು. ಹೆಣ್ಣಿಗಾಗಲೀ ಗ೦ಡಿಗಾಗಲೀ ದೈವಭಕ್ತಿ 
ಅಗತ್ಯವೆಂಬುದು ಅವರ ನಂಬಿಕೆ. 


ವಾಗೀಶ್ವರಿ ಮುತ್ತೈದೆತನಕ್ಕೆ ಮುಗಿಬಿದ್ದವರು. ಮುತ್ತೈದೆತನದ 
ಗೌರವಾದರಗಳಿಗೆ ಪಾತ್ರರಾಗಿದ್ದವರು. ಮುತ್ತೆ ದೆ ಸಾವು ಬಯಸಿದ್ದವರು. 
ಆದರೆ ಗಂಡ ತೀರಿಕೊಂಡಾಗ (೧೯೯೩) ವೈಧವ್ಯ ದುಃಖಕ್ಕೆ ಒಳಗಾದರು. 
ಮಾಮೂಲಿ ನೋವಿನ ಜೊತೆಗೆ, ತಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದ, 
ಮಂಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಾಡುತ್ತಿದ್ದ ಅವಕಾಶದಿಂದ 
ವಂಚಿತರಾದದ್ದು ಅನಾಥಪುಜ್ಞೆಗೆ ದೂಡಿತು; ಅವರ್ಣನೀಯ ತಳಮಳ 
ಹುಟ್ಟಿಸಿತು. ಸಾರ್ವಜನಿಕ ಗೀತಗಾಯನ ನಿಲ್ಲಿಸಿ ಏಕಾ೦ತ ಗೀತಗಾಯನಕ್ಕೆ 
ಒಗ್ಗಿಕೊ೦ಡರು. ಆ ನೆಪದಲ್ಲಿ ಗದ್ಯಬರವಣಿಗೆಗೆ ತೊಡಗಿದರು. 


32 ವಾಗೀಶ್ತರಿ ಶಾಸ್ತ್ರಿ 

ವಾಗೀಶ್ವರಿ ಶಾಸ್ತ್ರಿ ಅವರು ಸಂಪ್ರದಾಯದ ಹಾಡುಗಳು ಗಂಥವಲ್ಲದೆ 
ಇತರ ಗ್ರಂಥಗಳನ್ನೂ ಬರೆದು ಪ್ರಕಟಿಸಿ ಕನ್ನಡ ಸಾರಸ್ಪತಲೋಕದಲ್ಲಿ 
ಗುರುತಿಸಿಕೊ೦ಡಿದ್ದಾರೆ. ಉದಾಹರಣೆಗೆ : ಕರ್ನಾಟಕದ ಹಬ್ಬಗಳು (೧೯೮೩), 
ಹಿರಿಯರು ಹೇಳಿದ ಕತೆಗಳು ಭಾಗ-೧ (೧೯೮೬), ಸುಲಭ ಸಾಂಪ್ರದಾಯಿಕ 
ವಿವಾಹ (೧೯೯೩), ಕೀರ್ತನ ಕೇಸರಿ ಕೊಣನೂರು ಶ್ರೀಕಂಠಶಾಸಿಗಳ ಜೀವನ 
ಚರಿತ್ರೆ (೧೯೯೩), ಹಿಂದೂ ಸ್ತೀ : ಚಿತೆಯಿಂದ ಚಿಂತೆಗೆ (೧೯೯೫). 
ಸಿರಿಸಿಂಗಾರದ ಸಿಂಗಪುರ (೧೯೬ ೯೭) ಮತ್ತು ಅಪೂರ್ವ ಕಥಾಸಂಗಮ 
(೨೦೦೧). ಸನಾತನ ಸಂಸ್ಕೃತಿಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು 
ಲೇಖನಗಳನ್ನು ಬರೆದಿದ್ದಾರೆ. ಅವೆಲ್ಲ ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, 
ಸುಧಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 


ವಾಗೀಶ್ವರಿ ಅವರು ಮಗನ ಸಂಸಾರವನ್ನು ನೋಡುವ ಸಲುವಾಗಿ 
ಸಿಂಗಪುರ ಪ್ರವಾಸ (೧೯೯೭) ಕೈಗೊಂಡು ಅಲ್ಲಿ ಆರುತಿ೦ಗಳು ಇದ್ದುಬ೦ದರು. 
ಅದರ ನೆನಪಿನ ಪ್ರವಾಸ ಕಥನವನ್ನೂ ಬರೆದರು. ಮಗಳು ಮೊಮ್ಮಗಳ 
ಬಾಣಂತನದ ನೆಪದಲ್ಲಿ ಅಮೆರಿಕಾ ಪ್ರವಾಸ ಕೈಗೊಂಡು ಆರು ತಿಂಗಳಿದ್ದು 
ಬ೦ದರು (೧೯೯೮). ನ್ಯೂಯಾರ್ಕ್‌ ಕನ್ನಡ ಕೂಟದವರಿಂದ ಸನ್ಮಾನಕ್ಕೆ 
ಪಾತ್ರರಾದರು. ಎದೇಶದಲ್ಲಿ ಶ೦ಕರ ಮಠದ ಬಗೆಗೆ ಎರಡು ಲೇಖನಗಳನ್ನು 
ಬರೆದರು. 

ವಾಗೀಶ್ವರಿ ಶಾಸ್ತ್ರಿ ಅವರ ಸುದೀರ್ಪ ಜೀವನ ಸಾಧನೆ 
ಸಮೃದ್ಧವಾಗಿದೆ, ಸದಾಶಯದಿಂದ ಕೂಡಿದೆ. 


ಲ 


ಜೇ ತ ೫ 


ವಾಣೀಪ್ರದಿ ಪಾಸ್ತಿ 


ಬ್ರಾಹ್ಮಣ ಸಮಾಜದ ಮೌಖಿಕ ಪರಂಪರೆಯ ಅಸಂಖ್ಯಾತ 
ಸಂಪ್ರದಾಯದ ಹಾಡುಗಳನ್ನು ಹಿರಿಯ ಸ್ತ್ರೀಯರಿಂದ ಕಲಿತು, 
ಜೀವಮಾನವೆಲ್ಲಾ ಸುಶ್ರಾವ್ಯವಾಗಿ ಹಾಡಿ ಪಸಾರಮಾಡಿ, ಅಗಾಧ 
ನೆನಪಿನ ಶಕ್ತಿಯಿಂದ ಜೋಪಾನವಾಗಿ ಕಾಪಾಡಿಕೊಂಡು, 
ಕಂಠಸ್ಥಸಾಹಿತ್ಯವನ್ನು ಅಕ್ಷರಕ್ಕಿಳಿಸಿ, ಹೆಬ್ಬೊತ್ತಗೆಯ ರೂಪದಲ್ಲಿ 
ಅಚ್ಚುಕಟ್ಟಾಗಿ ಪ್ರಕಟಿಸಿದ ವಾಗೀಶ್ವರಿ ಶಾಸ್ತ್ರಿ ಅವರು ಸಂಪ್ರದಾಯದ 
ಹಾಡುಗಳ ಮಹಾಕೋಶ. ತ್‌ ಹಾಡುಗಳು ಹಾಗೂ : 
ಸಾಂಸ್ಕೃತಿಕ ಹಿನ್ನೆಲೆಯ ಅರ್ಥಪೂರ್ಣ ಟಿಪುಣಿಗಳಿಂದ ಕೂಡಿದ, 
ಅವರ 'ಹೃದಯ ಸಂಪುಟ : ಸಂಪ್ರದಾಯ ಹಾಡುಗಳು' ಬೃಹತ್‌ 
ಗ್ರಂಥ ಬ್ರಾಹ್ಮಣ ಜಾನಪದ ಅಧ್ಯಯನಕಾರರಿಗೆ ಅಕ್ಷಯನಿಧಿ. 
ಶಿಷ್ಟ ಸಮಾಜದ ಮಹಿಳೆಯರ ಜೀವನದ ಧನ್ಯತೆಗೆ 
ಸ್ಫೂರ್ತಿಸೆಲೆಯಾದ ಹಾಡುಗಳ ದನಿಬನಿ ಧಾಟಿಲಯಗಳು 
4 ವಿಭಿನ್ನ ವಾಗಿವೆ. ಪ್ರಸ್ತುತ ಗ್ರಂಥದಲ್ಲಿ ವಾಗೀಶ್ವರಿ ಶಾಸ್ತ್ರಿ ಅವರ 
ಬದುಕು ಬರಹವನ್ನು ಕಾಣಬಹುದು. 


ಪ್ರೊ. ಡಿ. ಲಿಂಗಯ್ಯ 


ಕರ್ನಾಟಕ ಜಾನಪದ ಪರಿಷತ್ತು 
ನಂ.೧, ಜಾನಪದ ಸಿರಿಭುವನ, ಜಲದರ್ಶಿನಿ ಬಡಾವಣೆ, 
ಎಂ.ಎಸ್‌. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ಹೊಸ ಬಿ.ಇ.ಎಲ್‌. ರಸ್ತೆ, 
ಬೆಂಗಳೂರು - ೫೬೦ ೦೫೪